ಬೆಂಗಳೂರು: ಕರವೇ ನಾರಾಯಣಗೌಡರು ಸೇರಿ 29 ಮಂದಿಗೆ ಕೋರ್ಟ್ ಜನವರಿ 10ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಕನ್ನಡ ಬೋರ್ಡ್ ಅಭಿಯಾನದ ವೇಳೆ ಚಿಕ್ಕಜಾಲ ಪೊಲೀಸರು ಅರೆಸ್ಟ್ ಮಾಡಿ, FIR ದಾಖಲು ಮಾಡಿದ್ದಾರೆ. ಕರವೇ ನಾರಾಯಣಗೌಡರು ಸೇರಿ ಹಲವರ ಮೇಲೆ FIR ದಾಖಲಾಗಿದೆ. ಇಂದು ನಸುಕಿನ ಜಾವ ಜಡ್ಜ್ ನಿವಾಸದಲ್ಲಿ ನ್ಯಾಯಾಧೀಶರ ಮುಂದೆ ನಾರಾಯಣಗೌಡ ಸೇರಿ 29 ಮಂದಿಯನ್ನು ಹಾಜರುಪಡಿಸಿದ್ದರು. ದೇವನಹಳ್ಳಿ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಎಲ್ಲರನ್ನೂ ಶಿಫ್ಟ್ ಮಾಡಿದ್ದಾರೆ. ನಾರಾಯಣಗೌಡ ಸೇರಿದಂತೆ 29 ಮಂದಿಯೂ ಪರಪ್ಪನ ಅಗ್ರಹಾರ ಜೈಲ್ ಗೆ ಶಿಫ್ಟ್ ಮಾಡಲಾಗಿದೆ. ಕರವೇ ಅಧ್ಯಕ್ಷ ನಾರಾಯಣಗೌಡರು ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲೇ ಇದ್ದರು. ಕರವೇ ನಿನ್ನೆ ಕನ್ನಡ ಬೋರ್ಡ್ಗಾಗಿ ಬೃಹತ್ ಹೋರಾಟ ನಡೆಸಿತ್ತು.
ಇನ್ನೂ ಈ ಬಗ್ಗೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ಮಾತನಾಡಿ ಕನ್ನಡಕ್ಕಾಗಿ ಹೋರಾಡಿದ ನಮ್ಮನ್ನು ಹತ್ತಿಕ್ಕುವ ಕೆಲಸ ಮಾಡ್ತೀರ, ಮುಖ್ಯಮಂತ್ರಿಗಳೇ ನಿಮ್ಮ ಕನ್ನಡ ಪ್ರೇಮ ಕಂಡು ಬೆಂಬಲಿಸಿದ್ದೆವು. ಇವತ್ತು ಕನ್ನಡಕ್ಕಾಗಿ ಬೀದಿಗಿಳಿದ ನಮ್ಮ ಮೇಲೆ ಪೊಲೀಸ್ ಶಕ್ತಿ ಬಳಸಿದ್ದೀರಿ, ಶಾಂತಿಯುತ ಹೋರಾಟವನ್ನೂ ಹತ್ತಿಕ್ಕುವ ಪ್ರಯತ್ನ ಮಾಡಿದ್ದೀರಿ ಎಂದು ರಾಜ್ಯ ಸರ್ಕಾರದ ಮೇಲೆ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಕನ್ನಡ ಸಿಗಬೇಕಾದ ಆದ್ಯತೆ ಸಿಗಲೇಬೇಕು, ಕನ್ನಡ ಬೋರ್ಡ್ಗಾಗಿ ನಡೆಸುತ್ತಿರುವ ಹೋರಾಟ ಕೈಬಿಡಲ್ಲ. ಫೆಬ್ರವರಿ 28ರ ಗಡುವು ಕೊಟ್ಟಿದ್ದರೂ ಹೋರಾಟ ನಿಲ್ಲಿಸಲ್ಲ-
ನಮ್ಮನ್ನು ಅರೆಸ್ಟ್ ಮಾಡಿ ಎಷ್ಟು ದಿನ ಕೂಡಿ ಹಾಕ್ತೀರಿ, ನಾರಾಯಣಗೌಡರು ಗಲಾಟೆ ಮಾಡ್ತಿರೋದು ಯಾಕೆ ಜನರಿಗೆ ಗೊತ್ತು. ಮಾರ್ವಾಡಿ, ಸಿಂಧಿಗಳ ಮೇಲೆ ಕ್ರಮಕೈಗೊಳ್ಳದ ವ್ಯವಸ್ಥೆಗೆ ನನ್ನ ಧಿಕ್ಕಾರ.
ಬೆಂಗಳೂರಿನಲ್ಲಿ ಶೇ.30ರಷ್ಟು ಕನ್ನಡಿಗರಿದ್ದಾರೆ ಅಂತಾ ಸಿಂಧಿ, ಗುಜರಾತಿಗಳು ಹೇಳಿದ್ದಾರೆ, ಇಂಥಾ ಕನ್ನಡ ವಿರೋಧಿಗಳ ಮೇಲೆ ಕ್ರಮ ಕೈಗೊಳ್ಳಿ ಮುಖ್ಯಮಂತ್ರಿಗಳೇ ಎಂದು ಸರ್ಕಾರದ ವಿರುದ್ಧ ಟಿ.ಎ.ನಾರಾಯಣಗೌಡರು ಆಕ್ರೋಶ ಹೊರಹಾಕಿದ್ದಾರೆ.