ಬೆಂಗಳೂರು:- ಕನ್ನಡಕ್ಕಾಗಿ ಹೋರಾಟ ಮಾಡಿ ಜೈಲು ಸೇರಿರುವ ಕರವೇ ನಾರಾಯಣಗೌಡ ಮತ್ತು ಕಾರ್ಯಕರ್ತರು ಮೂರು ದಿನಗಳಾದರೂ ಇನ್ನೂ ಕೂಡ ರಿಲೀಸ್ ಆಗಿಲ್ಲ.
ಇನ್ನೂ ಕರವೇ ನಾರಾಯಣಗೌಡ ಬಂಧನಕ್ಕೆ ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಜಯ ಕರ್ನಾಟಕ ಸಂಘಟನೆಯಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ.
ಕನ್ನಡ ಭಾಷೆ ನೆಲ, ಜಲ ವಿಚಾರವಾಗಿ ನಾವು ಯಾವತ್ತು ಹೋರಾಟ ಮಾಡುತ್ತೇವೆ. ಕನ್ನಡಿಗರಿಗಾಗಲಿ ಅಥವಾ ಕನ್ನಡ ಭಾಷೆಗಾಗಲಿ ಯಾವುದೇ ದಕ್ಕೆ ಬರಬಾರದು. ಎಲ್ಲ ಕನ್ನಡಪರ ಸಂಘಟನೆಗಳು ಒಟ್ಟಾಗಿ ಹೋರಾಡಬೇಕು. ಕನ್ನಡ ಭಾಷೆಗಾಗಿ ಹೋರಾಟ ಮಾಡಿದ ಹೋರಾಟಗಾರನ್ನ ಬಂಧಿಸಿರೋದು ಸರಿಯಿಲ್ಲ. ಕೂಡಲೇ ಅವರಿಗೆ ಬಂಧನದಿಂದ ಮುಕ್ತಿ ಮಾಡಬೇಕು. ಬಿಡಗಡೆ ಮಾಡಲಿಲ್ಲ ಅಂದ್ರೆ ಜಯ ಕರ್ನಾಟಕ ಸಂಘಟನೆಯಿಂದ ತೀರ್ವ ಹೋರಾಟದ ಎಚ್ಚರಿಕೆ ನೀಡಲಾಗಿದೆ.
ಈ ಬಗ್ಗೆ ಸಂಘಟನೆ ನಾಯಕರೆಲ್ಲರೂ ಸೇರಿ ಸಭೆ ಮಾಡ್ತೇವೆ ಎಂದು ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಯೋಗಾನಂದ ಹೇಳಿಕೆ ನೀಡಿದ್ದಾರೆ.