PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

Bombay jayashree: ಪ್ರಜ್ಞಾಹೀನ ಸ್ಥಿತಿಯಲ್ಲಿ ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಪತ್ತೆ

March 24, 2023

Ajith Kumar: ತಮಿಳು ನಟ ಅಜಿತ್ ಕುಮಾರ್ ತಂದೆ ಸುಬ್ರಮಣಿಯಂ ನಿಧನ

March 24, 2023

ಹಿಂಡೆನ್ ಬರ್ಗ್ ವರದಿ ಬಳಿಕ ಜಾಕ್ ಡೋರ್ಸಿ ಸಂಪತ್ತಿನ ಮೌಲ್ಯ ಭಾರೀ ಕುಸಿತ

March 24, 2023
Facebook Twitter Instagram
Friday, March 24
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » ಹೊಸ​ಪೇ​ಟೆ: ಅಭಿಮಾನಿಗಳಿಂದ ಅಪ್ಪು ದೇವರ ಮಾಲೆಧಾರಣೆ
ಜಿಲ್ಲೆ Prajatv KannadaBy Prajatv KannadaMarch 3, 2023

ಹೊಸ​ಪೇ​ಟೆ: ಅಭಿಮಾನಿಗಳಿಂದ ಅಪ್ಪು ದೇವರ ಮಾಲೆಧಾರಣೆ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಮಾಲಾಧಾರಿಗಳು ಮಾ.18ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್‌ ಅವರ ಸಮಾಧಿ ದರ್ಶನ (ಪುಣ್ಯಭೂಮಿ) ಮಾಡಲಿದ್ದಾರೆ. ಅಪ್ಪು ಅವರ ಜನ್ಮದಿನವನ್ನು ಸರ್ಕಾರ ಸ್ಫೂರ್ತಿ ದಿನ ಎಂದು ಆಚರಿಸುತ್ತಿದೆ.

Wear the Garland of Puneeth Rajkumar in Hosapete grg

ಹೊಸಪೇಟೆ(ಮಾ.02):  ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ ಅಭಿಮಾನಿಗಳು ನಗರದಲ್ಲಿ ಬುಧವಾರ ಅಪ್ಪು ದೇವರ ಮಾಲೆ ಧರಿಸಿ ವ್ರತಾಚರಣೆಗೆ ಚಾಲನೆ ನೀಡಿದರು. ಒಂಬತ್ತು ಜನ ಅಭಿಮಾನಿಗಳು ಪುನೀತ್‌ ಪ್ರತಿಮೆ ಬಳಿ ವಿಶೇಷ ಪೂಜೆ ಸಲ್ಲಿಸಿ ಮಾಲೆ ಧರಿಸಿದರು.

ಅಪ್ಪು ದೇವರ ಮಾಲಾಧಾರಿಗಳು ಮಾ. 18ಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್‌ ಅವರ ಸಮಾಧಿ ದರ್ಶನ (ಪುಣ್ಯಭೂಮಿ) ಮಾಡಲಿದ್ದಾರೆ. ಅಪ್ಪು ಅವರ ಜನ್ಮದಿನವನ್ನು ಸರ್ಕಾರ ಸ್ಫೂರ್ತಿ ದಿನ ಎಂದು ಆಚರಿಸುತ್ತಿದೆ. ಈ ಹಿನ್ನೆಲೆ ವಿಜಯನಗರ ಜಿಲ್ಲೆಯ ಅಪ್ಪು ಅಭಿಮಾನಿಗಳು ಅಪ್ಪು ದೇವರ ಮಾಲಾಧಾರಣೆ ಮಾಡಿದರು. ಮಾ. 17ರಂದು ಪುನೀತ್‌ ಪುತ್ಥಳಿ ಬಳಿ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ. ಮಾ. 18ರಂದು ಮಾಲಾಧಾರಿಗಳು ಪುನೀತ್‌ ಅವರ ಸಮಾಧಿ ದರ್ಶನ

ಅಪ್ಪು ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ: ‘ಕರ್ನಾಟಕ ರತ್ನ’ನ ನೆನಪಿನಲ್ಲಿ ಅಭಿಮಾನಿಗಳು ತಲ್ಲೀನ

ಮಾಲಾವ್ರತ ಹೇಗೆ ಆಚರಣೆ?:

ಅಪ್ಪು ದೇವರ ಡಾಲರ್‌ ಇರುವ ಮಾಲೆ ಧರಿಸುವುದು, ಕೇಸರಿ ಶಾಲು, ಕೇಸರಿ ಪಂಚೆ, ಕೇಸರಿ ಶರ್ಚ್‌ ಧರಿಸಿ, ಅಪ್ಪು ದೇವರ ಫೋಟೊ ಇಟ್ಟು ಪೂಜೆ ಮಾಡುವುದು. ಬೆಳಗ್ಗೆ ಸೂರ್ಯ ಉದಯಿಸುವ ಮುನ್ನ ಹಾಗೂ ಸಂಜೆ ಸೂರ್ಯ ಮುಳುಗಿದ ಬಳಿಕ ಸ್ನಾನ ಮಾಡುವುದು. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ, ರಾತ್ರಿ ಉಪಾಹಾರ ಸೇವಿಸುವುದು.

ದುಶ್ಚಟಗಳಿಂದ ದೂರ ಇರಬೇಕು:

ಅಪ್ಪು ದೇವರ ಮಾಲೆ ಧರಿಸುವವರು ದುಶ್ಚಟಗಳಿಂದ ದೂರವಿರಬೇಕು. ಮಾಲೆ ಹಾಕುವ ಅಭಿಮಾನಿಗಳು ಐದು ದಿವಸ, 11 ದಿವಸ ಮತ್ತು ಒಂದು ದಿವಸ ಮಾಲೆ ಹಾಕಬಹುದು. ಮಾಲೆ ಹಾಕುವ ಎಲ್ಲ ಅಪ್ಪು ಸ್ವಾಮಿಗಳು ಇಲ್ಲಿಂದ ಪುಣ್ಯಭೂಮಿಗೆ ತೆರಳುವಾಗ ಕೈಲಾದ ದಿನಸಿಗಳನ್ನು ಇರುಮುಡಿಯಾಗಿ ತೆಗೆದುಕೊಂಡು ಹೋಗತಕ್ಕದ್ದು. ಅಕ್ಕಿ, ಬೇಳೆ, ಎಣ್ಣೆ ದಿನಸಿಗಳನ್ನು ತೆಗೆದುಕೊಂಡು ಹೋಗಬಹುದು.

ಎಲ್ಲ ಮಾಲೆ ಧರಿಸುವ ಮಾಲಾಧಾರಿಗಳು ಅಪ್ಪು ದೇವರ ಪುಣ್ಯಭೂಮಿ ದರ್ಶನ ಪಡೆದು, ವಾಪಸ್‌ ಬಂದ ನಂತರ ಹಂಪಿಯ ಪುಣ್ಯ ನದಿಯಲ್ಲಿ ಸ್ನಾನ ಮಾಡಿ, ಶ್ರೀವಿರೂಪಾಕ್ಷೇಶ್ವರ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ, ಮಾಲೆಯನ್ನು ವಿಸರ್ಜನೆ ಮಾಡತಕ್ಕದ್ದು ಎಂದು ವಿಜಯನಗರ ಜಿಲ್ಲೆಯ ಡಾ. ಪುನೀತ್‌ ರಾಜಕುಮಾರ ಅಭಿಮಾನಿ ಬಳಗದವರು ತಿಳಿಸಿದ್ದಾರೆ. ಪುನೀತ್‌ ರಾಜಕುಮಾರ ವೃತ್ತದಲ್ಲಿ ನಡೆದ ಮಾಲಾಧಾರಣೆ ಕಾರ್ಯಕ್ರಮದ ನಿಮಿತ್ತ ನಡೆದ ಪೂಜಾ ಕಾರ್ಯಕ್ರಮದಲ್ಲಿ ಯುವ ನಾಯಕ ಸಿದ್ಧಾರ್ಥ ಸಿಂಗ್‌ ಭಾಗಿಯಾಗಿದ್ದರು.

ಅನಾಥಾಲಯಗಳಿಗೆ ದಿನಸಿ:

ಅಪ್ಪು ದೇವರ ಮಾಲಾಧಾರಿಗಳು ಇರುಮುಡಿಯಾಗಿ ತೆಗೆದುಕೊಂಡು ಹೋಗುವ ಅಕ್ಕಿ, ಬೇಳೆ, ಎಣ್ಣೆ ದಿನಸಿಗಳನ್ನು ಅನಾಥಾಲಯಗಳಿಗೆ ಕೊಡಲಾಗುತ್ತದೆ. ನಾವು ಅಪ್ಪು ಅವರ ಅಭಿಮಾನದ ಮೇಲೆ ಮಾಲೆ ಧರಿಸಿದ್ದೇವೆ. ನಾವು ಅಪ್ಪು ಅವರನ್ನು ದೇವರಂತೆ ಪೂಜಿಸುತ್ತೇವೆ ಎಂದರು.

ಅಯ್ಯಪ್ಪ ಸ್ವಾಮಿ ನಂತರ ‘ಪುನೀತ್ ರಾಜ್‌ಕುಮಾರ್ ಮಾಲೆ’ ಹಾಕುತ್ತಿರುವ ಅಭಿಮಾನಿಗಳು; ವ್ರತ ಮಾಡೋ ವಿಧಾನ ಹೀಗಿದೆ..

ಪುನೀತ್‌ ರಾಜಕುಮಾರ ಅವರ ಮೇಲಿನ ಅಭಿಮಾನಕ್ಕಾಗಿ ಅಪ್ಪು ದೇವರ ಮಾಲೆಧಾರಣೆ ಮಾಡಿದ್ದೇವೆ. ವ್ರತಾಚರಣೆ ಕೈಗೊಂಡು ಮಾ. 18ರಂದು ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಪುಣ್ಯಭೂಮಿ ದರ್ಶನ ಮಾಡುತ್ತೇವೆ. ಇರುಮುಡಿ ದಿನಸಿಯನ್ನು ಅನಾಥಾಲಯಗಳಿಗೆ ನೀಡುತ್ತೇವೆ. ಮಾ. 17ರ ವರೆಗೆ ಅಪ್ಪು ಅಭಿಮಾನಿಗಳು ಮಾಲೆಧಾರಣೆ ಮಾಡಲಿದ್ದಾರೆ ಅಂತ ಹೊಸಪೇಟೆ ಪುನೀತ್‌ ಅಭಿಮಾನಿಗಳು ಕಿಚಿಡಿ ವಿಶ್ವ, ಜೋಗಿ ತಾಯಪ್ಪ ಹೇಳಿದ್ದಾರೆ.

ಪುನೀತ್‌ ರಾಜಕುಮಾರ ಅವರ ಮೇಲಿನ ಅಭಿಮಾನಕ್ಕಾಗಿ ಅಪ್ಪು ದೇವರ ಮಾಲೆ ಧರಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ನಂಬಿಕೆ ಮೇಲೆ ನಡೆಯುತ್ತಾರೆ. ಹಾಗಾಗಿ ಅಭಿಮಾನಕ್ಕಾಗಿ ಮಾಲೆ ಧರಿಸಿದ್ದಾರೆ. ನಾನು ಕೂಡ ಅಪ್ಪು ಅವರ ಅಭಿಮಾನಿಯಾಗಿರುವೆ. ಅವರ ಆದರ್ಶಗಳನ್ನು ಪಾಲಿಸುವೆ ಅಂತ ಹೊಸಪೇಟೆ ಯುವ ನಾಯಕ ಸಿದ್ಧಾರ್ಥ ಸಿಂಗ್‌ ತಿಳಿಸಿದ್ದಾರೆ.

Share. Facebook Twitter WhatsApp Pinterest LinkedIn Tumblr Telegram Email

Related Posts

ದಾಖಲೆ ಇಲ್ಲದೇ ಸಾಗಿಸುತ್ತಿದ್ದ 53 ಲಕ್ಷ ನಗದು ವಶಕ್ಕೆ ಪಡೆದ ಗರಗ ಪೊಲೀಸರು

March 24, 2023

4 ವರ್ಷಗಳ ನಂತ್ರ 100 ಅಡಿಗೆ ಕುಸಿದ KRS ಡ್ಯಾಂ ನೀರಿನ ಮಟ್ಟ

March 24, 2023

ಯಡಿಯೂರಪ್ಪ ನಿವಾಸದಲ್ಲಿ ಉಪಹಾರ ಸೇವಿಸಿದ ಸಚಿವ ಅಮಿತ್ ಶಾ

March 24, 2023

ಹೆಣ್ಣುಮಕ್ಕಳು ಮೈತ್ರಿ ಮುಟ್ಟಿನ ಕಪ್ ಬಳಕೆ ಮಾಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಿ

March 23, 2023

ಸಿದ್ಧೇಶ್ವರ ರಥೋತ್ಸವಕ್ಕೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚಣೆ: ಅದ್ದೂರಿಯಾಗಿ ನಡೆದ ಜಾತ್ರಾ ಮಹೋತ್ಸವ

March 23, 2023

ಗ್ರಾಮೀಣ ಕ್ರೀಡೆ ಬಗ್ಗೆ ಜನರ ಆಸಕ್ತಿ : ಹೋರಿ ಸ್ಪರ್ಧೆ ನೊಡಲು ಸೇರಿದ ನೂರಾರು ಜನ.

March 23, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.