ದೆಹಲಿ: ಪಂಚ ಗ್ಯಾರಂಟಿಗಳಲ್ಲಿ ಪರಿಷ್ಕರಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಸಚಿವ ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಅರ್ಹ ಫಲಾನುಭವಿಗಳಿಗೆ ಈ ಯೋಜನೆ ತಲುಪ್ಪುತ್ತದೆ.
ಪಂಚ ಗ್ಯಾರಂಟಿಗಳನ್ನು ನಾವು ನಡೆಸುತ್ತೇವೆ ಅಂತಾ ಹೇಳಿ ಜಾರಿಗೆ ತಂದಿದ್ದೇವೆ
ಪರಿಷ್ಕರಣೆ ಮಾಡಿದರೇ ಆರ್ಥಿಕ ಹೊರೆಯಲ್ಲಿ ಸ್ವಲ್ಪ ತಗ್ಗಿಸಬಹುದು, ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯದಲ್ಲಿ ಪರಿಷ್ಕರಣೆ ಮಾಡಲು ಅವಕಾಶವಿದೆ, ಸಿಎಂ ಬಳಿ ಅನ್ನಭಾಗ್ಯ ವಿಚಾರದಲ್ಲಿ ಚರ್ಚೆ ಮಾಡ್ತೇನೆ, APL ಮತ್ತು BPL ಕಾರ್ಡ್ ಪರಿಷ್ಕರಣೆ ಮಾಡಿ ಕಡಿತ ಆರ್ಥಿಕ ಹೊರೆ ತಗ್ಗಿಸಲು ಸಹಾಯವಾಗುತ್ತೆ ಎಂದು ತಿಳಿಸಿದ್ದಾರೆ.