ಡೆಲ್ಲಿ ವಿರುದ್ದ ಕರ್ನಾಟಕ ತಂಡಕ್ಕೆ 4 ವಿಕೆಟ್ ಗಳ ಭರ್ಜರಿ ಜಯಭೇರಿ

ಕ್ರೀಡೆ

ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಸತತ 4ನೇ ಗೆಲುವು ಸಾಧಿಸಿ, ಎಲೈಟ್‌ ‘ಬಿ’ ಗುಂಪಿನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಗುರುವಾರ ನಡೆದ ಪಂದ್ಯದಲ್ಲಿ ದೆಹಲಿ ವಿರುದ್ಧ ಮಾರಕ ಬೌಲಿಂಗ್‌ ದಾಳಿ ನಡೆಸಿದ ರಾಜ್ಯ ತಂಡಕ್ಕೆ 4 ವಿಕೆಟ್‌ ಜಯ ಒಲಿಯಿತು.

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 45.4 ಓವರಲ್ಲಿ 159 ರನ್‌ಗೆ ಆಲೌಟ್‌ ಆಯಿತು. ವೇಗಿ ವಾಸುಕಿ ಕೌಶಿಕ್‌ 10 ಓವರಲ್ಲಿ 23 ರನ್‌ಗೆ 3 ವಿಕೆಟ್‌ ಕಿತ್ತರು. ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ 25 ರನ್‌ಗೆ 3 ವಿಕೆಟ್‌ ಪಡೆದರು. ಸುಲಭ ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ಆರ್‌.ಸಮಥ್‌ರ್‍ ಆಸರೆಯಾದರು. 73 ಎಸೆತಗಳಲ್ಲಿ 59 ರನ್‌ ಗಳಿಸಿದರು. ಮನೀಶ್‌ ಪಾಂಡೆ 4 ಸಿಕ್ಸರ್‌ನೊಂದಿಗೆ 37 ಎಸೆತದಲ್ಲಿ 48 ರನ್‌ ಸಿಡಿಸಿ ತಂಡ 29.4 ಓವರಲ್ಲಿ ಗುರಿ ತಲುಪಲು ನೆರವಾದರು.

ಸ್ಕೋರ್‌: 
ದೆಹಲಿ 45.4 ಓವರಲ್ಲಿ 159/10(ಲಲಿತ್‌ 59, ನಿತೀಶ್‌ 30, ಕೌಶಿಕ್‌ 3-23, ಶ್ರೇಯಸ್‌ 3-25)
ಕರ್ನಾಟಕ 29.4 ಓವರಲ್ಲಿ 161/6(ಸಮಥ್‌ರ್‍ 59, ಪಾಂಡೆ 48, ಮಯಾಂಕ್‌ ಯಾದವ್‌ 4-47)