ಕಾರವಾರ: ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಬಾಳ್ಳುಪೇಟೆ ಮಾರ್ಗದ ರೈಲು ಹಳಿಯ ಮೇಲೆ ಭೂಕುಸಿತದಿಂದ ಮಣ್ಣು ಬಿದ್ದಿದ್ದು ಈ ಭಾಗದಲ್ಲಿ ತೆರಳುವ ರೈಲ್ವೆ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಆದರೀಗ ಮಣ್ಣನ್ನು ತೆರವುಗೊಳಿಸಲಾಗಿದ್ದು ಎಂದಿನಂತೆ ಕರಾವಳಿ ಹಾಗೂ ಇತರೆ ಭಾಗಕ್ಕೆ ಸಂಚರಿಸುವ ರೈಲುಗಳು ಎಂದಿನಂತೆ ಆಗಸ್ಟ್ 20 ರಿಂದ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಆಗಸ್ಟ್ 20 ರಿಂದ ಈ ಭಾಗದ ರೈಲು ಸಂಚಾರ ಪುನರಾರಂಭ
1) ರೈಲು ಸಂಖ್ಯೆ- 16586 SMVT- ಮುರ್ಡೇಶ್ವರ – ಬೆಂಗಳೂರು ಎಕ್ಸ್ಪ್ರೆಸ್
2) ರೈಲು ಸಂಖ್ಯೆ- 16585 SMVT – ಬೆಂಗಳೂರು- ಮುರುಡೇಶ್ವರ ಎಕ್ಸ್ಪ್ರೆಸ್
3) ರೈಲು ಸಂಖ್ಯೆ- 16595 KSR-ಬೆಂಗಳೂರು -ಕಾರವಾರ ಎಕ್ಸ್ಪ್ರೆಸ್
4) ರೈಲು ಸಂಖ್ಯೆ-16596 -ಕಾರವಾರ KSR- ಬೆಂಗಳೂರು ಎಕ್ಸ್ಪ್ರೆಸ್
5) ರೈಲು ಸಂಖ್ಯೆ- 16511KSR- ಬೆಂಗಳೂರು -ಕಣ್ಣೂರು ಎಕ್ಸ್ಪ್ರೆಸ್
6) ರೈಲು ಸಂಖ್ಯೆ- 16511 KSR- ಕಣ್ಣೂರು- ಬೆಂಗಳೂರು ಎಕ್ಸ್ಪ್ರೆಸ್
7) ರೈಲು ಸಂಖ್ಯೆ-16515- ಯಶವಂತಪುರ- ಕಾರವಾರ ಎಕ್ಸ್ಪ್ರೆಸ್
8) ರೈಲು ಸಂಖ್ಯೆ- 07377 -ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ವಿಶೇಷ ರೈಲು