ಬ್ರಿಟನ್ ನ ವೇಲ್ಸ್ನ ರಾಜಕುಮಾರಿ ಕೇಟ್ ಅವರು ಬಕಿಂಗ್ಹ್ಯಾಂ ಅರಮನೆಯ ಬಾಲ್ಕನಿಯಿಂದ ಮಿಲಿಟರಿ ಪರೇಡ್ ವೀಕ್ಷಿಸಿ, ನೆರೆದಿದ್ದ ಜನರತ್ತ ಕೈಬೀಸಿದರು. ಅವರು ಕ್ಯಾನ್ಸರ್ಗೆ ಚಿಕಿತ್ಸೆ ಪಡೆದ ನಂತರದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಇದೇ ಮೊದಲು.
42 ವರ್ಷ ವಯಸ್ಸಿನ ಕೇಟ್ ಅವರು ಜನವರಿಯಲ್ಲಿ ಉದರದ ಶಸ್ತ್ರಚಿಕಿತ್ಸೆ ಒಳಗಾದ ನಂತರ ಎರಡು ವಾರ ಆಸ್ಪತ್ರೆಯಲ್ಲಿದ್ದರು. ಇದಾದ ಎರಡು ತಿಂಗಳ ನಂತರ ವಿಡಿಯೊ ಸಂದೇಶವನ್ನು ರವಾನಿಸಿದ ಅವರು ತಮಗೆ ಕ್ಯಾನ್ಸರ್ ಇರುವುದಾಗಿ, ಮುನ್ನೆಚ್ಚರಿಕೆಯ ಭಾಗವಾಗಿ ಕಿಮೊಥೆರಪಿಗೆ ಒಳಗಾಗಿರುವುದಾಗಿ ತಿಳಿಸಿದ್ದರು. ಈಗಲೂ ಅವರ ಚಿಕಿತ್ಸೆ ಮುಂದುವರೆದಿದೆ.
“ನನ್ನ ವೈದ್ಯಕೀಯ ತಂಡವು ನಾನು ತಡೆಗಟ್ಟುವ ಕೀಮೋಥೆರಪಿಯ ಕೋರ್ಸ್ಗೆ ಒಳಗಾಗಬೇಕೆಂದು ಸಲಹೆ ನೀಡಿದೆ ಮತ್ತು ನಾನು ಈಗ ಆ ಚಿಕಿತ್ಸೆಯ ಆರಂಭಿಕ ಹಂತದಲ್ಲಿದ್ದೇನೆ” ಎಂದು ಮಾರ್ಚ್ 20 ರಂದು ಚಿತ್ರೀಕರಿಸಲಾದ ವೀಡಿಯೊದಲ್ಲಿ ರಾಜಕುಮಾರಿ ಕೇಟ್ ಹೇಳಿದ್ದಾರೆ.
“ಇದು ಸಹಜವಾಗಿ ದೊಡ್ಡ ಆಘಾತವನ್ನು ತಂದಿತು, ಮತ್ತು ವಿಲಿಯಂ ಮತ್ತು ನಾನು ನಮ್ಮ ಯುವ ಕುಟುಂಬದ ಸಲುವಾಗಿ ಇದನ್ನು ಖಾಸಗಿಯಾಗಿ ಪ್ರಕ್ರಿಯೆಗೊಳಿಸಲು ಮತ್ತು ನಿರ್ವಹಿಸಲು ನಾವು ಎಲ್ಲವನ್ನೂ ಮಾಡುತ್ತಿದ್ದೇವೆ ಎಂದು ಕೇಟ್ ಈ ಹಿಂದೆ ವಿಡಿಯೋದಲ್ಲಿ ತಿಳಿಸಿದ್ದರು.