ದರ್ಶನ್ ನಟನೆಯ ಕಾಟೇರ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಭರ್ಜರಿಯಾಗಿ ಎಂಟ್ರಿಕೊಟ್ಟ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಇದೀಗ ಕ್ಯೂಸ್ ಆಗಿ ಫೋಟೋ ಶೂಟ್ ಮಾಡಿಸಿದ್ದಾರೆ.
ಮೊದಲ ಸಿನಿಮಾದಲ್ಲೇ ಚಾಲೆಂಜಿಂಗ್ ಸ್ಟಾರ್ ಗೆ ಜೋಡಿಯಾಗುವ ಮೂಲಕ ಗಾಂಧಿನಗರಕ್ಕೆ ಎಂಟ್ರಿಕೊಟ್ಟ ಆರಾಧನಾ ರಾಮ್ ಇತ್ತೀಚಿಗೆ ಸೈಮಾ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ. ಅದೇ ಖುಷಿಯಲ್ಲಿಯೇ ಇರೋ ಆರಾಧನಾ, ಆಗಾಗ ಹೊಸ ಲುಕ್ ನಲ್ಲಿ ಫೋಟೋಗೆ ಫೋಸ್ ನೀಡಿದ್ದಾರೆ.
ಮೊದಲ ಸಿನಿಮಾದಲ್ಲೇ ದರ್ಶನ್ ಎದುರಿಗೆ ನಟಿಸಿ ಆರಾಧನಾ ರಾಮ್ ಭೇಷ್ ಎನಿಸಿಕೊಂಡಿದ್ದಾರೆ. ಈ ಚಿತ್ರದ ಪಾತ್ರದ ನಟನೆಗಾಗಿಯೇ ದುಬೈನಲ್ಲಿ ನಡೆದ ಸೈಮಾದಲ್ಲಿ ಅತ್ಯುತ್ತಮ ಡೆಬ್ಯೂ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಆರಾಧನಾ ಹೊಸ ಲುಕ್ಗಳನ್ನ ಟ್ರೈ ಮಾಡ್ತಾನೇ ಇರ್ತಾರೆ. ಬಾಲಿವುಡ್ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮರಾ ಕಣ್ಣಿಗೂ ಸೂಪರ್ ಪೋಸ್ ಕೊಟ್ಟಿರೋದು ಗೊತ್ತೇ ಇದೆ. ಆಭರಣದ ಜಾಹೀರಾತಿಗಾಗಿಯೇ ಈ ಹಿಂದೆ ರ್ಯಾಂಪ್ ವಾಕ್ ಮಾಡಿದ್ದ ನಟಿ ಇದೀಗ ಮತ್ತೊಂದು ಚಂದದ ಫೋಟೋ ಶೂಟ್ ಮಾಡಿಸಿದ್ದಾರೆ.
ಕನ್ನಡಕ ಧರಿಸಿಕೊಂಡು ಕ್ಯಾಮಾರಾಗೆ ಫೋಸ್ ಕೊಟ್ಟಿರುವ ಆರಾಧನಾ ಸೂಪರ್ ಆಗಿಯೇ ಕಾಣಿಸುತ್ತಿದ್ದಾರೆ. ಕಪ್ಪು ಫ್ರೇಮ್ ಇರೋ ಕನ್ನಡಕ ಧರಿಸಿರೋ ಆರಾಧನಾ ಇದಕ್ಕೆ ಒಪ್ಪುವ ಹಸಿರು ಬಣ್ಣದ ಟೀಶರ್ಟ್ ಧರಿಸಿದ್ದಾರೆ.