ಬೆಂಗಳೂರು: ಬೆಂಗಳೂರಿನ ಬಸವನಗುಡಿ ವಿಧಾನ ಸಬಾ ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆಯ ವಿಷಯ ಕೇಳಿ ಬರುತ್ತಿದೆ. ಜನಾನುರಾಗಿ ನಾಯಕ ಕಟ್ಟೆ ಸತ್ಯ ಅವರನ್ನ ಬಸವನಗುಡಿ ಕ್ಷೇತ್ರದ ಜನ ಬಯಸಿದ್ದಾರೆ.
ಬೆಂಗಳೂರು ಮಹಾನಗ ಪಾಲಿಕೆಗೆ (ದಕ್ಷಿಣದಲ್ಲಿ) ಮೊಟ್ಟ ಮೊದಲನೆಯ ಬಾರಿಗೆ ಬಿಜೆಪಿ ವತಿಯಿಂದ ಆಯ್ಕೆಯಾದಂತಹ ವ್ಯಕ್ತಿ ಕಟ್ಟೆ ಸತ್ಯ. ಗೋಕಾಕ್ ವರದಿ ಕನ್ನಡ ಹೋರಾಟದಲ್ಲಿ ಪಾಲ್ಗೊಳ್ಳುವ ಸಲುವಾಗಿ ಕಟ್ಟೆ ಬಳಗ ಎಂಬ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಯಾಗಿ, ಕನ್ನಡದ ಭಾಷೆಯ ಹೋರಾಟಕ್ಕಾಗಿ ಕಾರ್ಯಯೋನ್ಮುಖರಾಗಿ ಕಾರ್ಯ ಮಾಡಿದ್ದಾರೆ. ನಂತರದ ದಿನಗಳಲ್ಲಿ ಸಂಘ ಪರಿವಾರದೊಡನೆ ಗುರುತಿಸಿಕೊಂಡು , ಎಲ್ಲಾ ಸ್ನೇಹಿತರೊಡನೆ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ನಂತರದ ದಿನಗಳಲ್ಲಿ ಜನಪರ ಹೋರಾಟಗಳಲ್ಲಿ ಪಾಲ್ಗೊಂಡು. ಅಂದಿನಿಂದ ಇಂದಿನವರೆಗೆ ಬಿಜೆಪಿಯ ಅಭ್ಯರ್ಥಿಗಳ ಪರವಾಗಿ ಹಗಲು ರಾತ್ರಿ ಶ್ರಮಿಸಿದ್ದಾರೆ.
ರಾಮ ಜನ್ಮಭೂಮಿಯ ಹೋರಾಟದಲ್ಲಿ ಸ್ನೇಹಿತರ ಜೊತೆಗೂಡಿ ಪಾಲ್ಗೊಂಡಿರುವುದು. ಬಿಜೆಪಿ ಹಾಗೂ ಕಟ್ಟೆ ಬಳಗದ ಹೆಸರಿನಲ್ಲಿ ಕ್ರೀಡಾ ಚಟುವಟಿಕೆಗಳು. ಜನಪರ ಹೋರಾಟಗಳಲ್ಲಿ ಪಾಲ್ಗೊಂಡು. ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದು ಕಟ್ಟೆ ಸತ್ಯ ಅವರ ಜನ ಪ್ರೀಯತೆಗೆ ಸಾಕ್ಷಿಯಾಗಿದೆ. 1989-90 ರ ದಶಕದಲ್ಲಿ ಬೆಂಗಳೂರು ನಗರ ಪಾಲಿಕೆಯ ಚುನಾವಣೆಯಲ್ಲಿ ಮೊಟ್ಟ ಮೊದಲನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿ ದಕ್ಷಿಣ ಬೆಂಗಳೂರಿನಲ್ಲಿ ವಿಜಯ ಪತಾಕೆ ಹಾರಿಸಿ ಕಮಲ ಅರಳುವಂತೆ ಮಾಡಿದರು. ನಗರ ಪಾಲಿಕೆ ಸದಸ್ಯರಾದ ನಂತರ ಪಕ್ಷದ ಅನೇಕ ಕಾರ್ಯ ಚಟುವಟಿಕೆಗಳಲ್ಲಿ ಕಾರ್ಯ ಪ್ರವೃತ್ತರಾದರು.
1989 ರಿಂದ 1920 ವರೆಗೆ ಸತತವಾಗಿ 5 ಬಾರಿ ನಗರಪಾಲಿಕೆ ಸದಸ್ಯರಾಗಿ ಪಾಲಿಕೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ . ಆಡಳಿತ ಪಕ್ಷದ ನಾಯಕರಾಗಿ, ಹಿರಿಯ ಸದಸ್ಯನಾಗಿ ಎಲ್ಲರಿಗೂ ಮಾರ್ಗದರ್ಶಕನಾಗಿ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿಕೊಂಡು ಬಂದರು. 2014 ರಲ್ಲಿ ಬಿಬಿಎಂಪಿಯ ಮಹಾಪೌರರಾಗಿ ಕಾರ್ಯನಿರ್ವಹಿಸಿ ಅತ್ಯುತ್ತಮ ಮಹಾಪೌರನೆಂದು ಹೆಸರು ಗಳಿಸಿದ್ದಾರೆ.
ಉತ್ತಮವಾದ ನಡತೆ ಉಳ್ಳ ಸದಸ್ಯ ಎಂದು ಹೆಸರುಗಳಿಸಿರುವ ಕಟ್ಟೆ ಸತ್ಯ ಅವರು ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅದರಲ್ಲೂ ಬಸವನಗುಡಿ ಪ್ರದೇಶದಲ್ಲಿ ಕಟ್ಟೆ ಸತ್ಯ ಎಂದೆ ಮನೆ ಮಾತಾಗಿರುವ ಇವರು, ಈಗ ಬಸವನಗುಡಿಯ ಜನರು ಇಲ್ಲಿಯವರಿಗೆ ಇತರ ಅಭ್ಯರ್ಥಿಗಳ ಪರವಾಗಿ ಕಾರ್ಯ ಮಾಡಿದ್ದು ಸಾಕು ನೀವು ಶಾಸಕರ ಸ್ಥಾನಕ್ಕೆ ಬನ್ನಿ ಎಂದು ಸ್ಥಳಿಯರು ಕಟ್ಟೆ ಸತ್ಯ ಅವರಗೆ ಒತ್ತಾಯ ಮಾಡುತ್ತಿದ್ದಾರೆ.
ಬೆಂಗಳೂರಿನ ದಕ್ಷಿಣ ಭಾಗದಿಂದ ಉತ್ತರ ಭಾಗಕ್ಕೆ ವಾಹನ ಸಂಚಾರಕ್ಕೆ ತೀವ್ರವಾದ ತೊಂದರೆ ಆಗುತ್ತಿದ್ದಾಗ ರಸ್ತೆಗಳ ಅಗಲೀಕರಣ ಮಾಡಿಸುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದ ಕಟ್ಟೆ ಸತ್ಯ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ನಮ್ಮ ಬೆಂಗಳೂರು ನನ್ನ ಕೊಡುಗೆ ಎಂಬ ಯೋಜನೆಯನ್ನು ರೂಪಿಸಿ ಬಿಬಿಎಂಪಿ ಯಲ್ಲಿ ಬರುವ ಶಾಲೆಗಳನ್ನು, ಆಸ್ಪತ್ರೆಗಳನ್ನು, ಡಿಸ್ಪೆನ್ ಸರಿಗಳನ್ನು, ಕೆರೆಗಳನ್ನು, ಉದ್ಯಾನವನಗಳನ್ನು, ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುವ ಯೋಜನೆಯನ್ನು ತಂದು ನಗರ ಪಾಲಿಕೆಗೆ ಆರ್ಥಿಕ ಹೊರೆ ಕಮ್ಮಿ ಮಾಡಿದರು.
ಬಸವನಗುಡಿ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಡಯಾಲಿಸಿಸ್ ಕೇಂದ್ರ ಸ್ಥಾಪನೆ. ಹೆರಿಗೆ ಆಸ್ಪತ್ರೆಯನ್ನು ಆಧುನೀಕರಣ ಗೊಳಿಸಿರುವುದು, ಖಾಸಗಿ ಸಹಭಾಗಿತ್ವದಲ್ಲಿ ಫಿಜಿಯೋಥೆರಪಿ, ದಂತ ಚಿಕಿತ್ಸಾಲಯ. ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಶಟಲ್ ಬ್ಯಾಡ್ಮಿಂಟನ್ ಕೋರ್ಟ್., ಕಲಾವಿದರ ಅನುಕೂಲಕ್ಕಾಗಿ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಅತ್ಯುತ್ತಮ ಕಲಾಮಂದಿರ ನಿರ್ಮಾಣ ಮಾಡಿರುವುದು ಈ ಕಲಾಮಂದಿರಕ್ಕೆ ಪ್ರಖ್ಯಾತ ಗಾಯಕರಾದ ಶ್ರೀ. ಸಿ ಅಶ್ವತ್ ಅವರ ಹೆಸರನ್ನು ನಾಮಕರಣ ಮಾಡಿಸಿದರು.
ಆರ್ಥಿಕವಾಗಿ ಹಿಂದುಳಿದ ನಾಗರಿಕರಿಗೆ ಕರ್ನಾಟಕದಲ್ಲಿ ಮೊಟ್ಟ ಮೊದಲನೇ ಬಾರಿಗೆ ಬಿಬಿಎಂಪಿ ಸ್ಥಾಪನೆ ಜೊತೆ ಒಡಂಬಡಿಕೆ ಮಾಡಿಕೊಂಡು ಜನ ಔಷಧಿ ಕೇಂದ್ರ ಸ್ಥಾಪನೆ. ಸುಸಜ್ಜಿತವಾದ ಕಬಡ್ಡಿ ಮೈದಾನವನ್ನು ನಿರ್ಮಿಸಿರುವುದು. ಯುವಕರು ವ್ಯಾಯಾಮ ಮಾಡಲು ಸಲುವಾಗಿ ಬೈಲು ವ್ಯಾಯಾಮ ಶಾಲೆಗಳು, ಪ್ರಮುಖ ಪ್ರದೇಶಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿರುವುದು ಇದೆಲ್ಲದಕ್ಕೂ ಮುಂಚೆ ಕಟ್ಟೆ ಬಳಗ ಕಟ್ಟೆ ಭವನದ ನಿರ್ಮಾಣ. ಸದರಿ ಕಟ್ಟಡದಲ್ಲಿ ನಾಗರಿಕರ ಅನುಕೂಲಕ್ಕಾಗಿ, ಅನೇಕ ನಾಗರಿಕ ಚಟುವಟಿಕೆಗಳಿಗೆ ಅನುಕೂಲ ಮಾಡಿ ಕೊಟ್ಟಿರುವುದು. ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿದ್ದ ನಾಗರಿಕರಿಗೆ ಆಹಾರ ಕಿಟ್ ಗಳ ವಿತರಣೆ, ಪ್ರತಿನಿತ್ಯ ಮಧ್ಯಾಹ್ನದ ಬಿಸಿ ಊಟ ಸುಮಾರು ೬೦ ದಿನಗಳ ಕಾಲ ಸ್ನೇಹಿತರೊಡನೆ ಸೇರಿ ಕಾರ್ಯ ಮಾಡಿದ್ದಾರೆ. ಕಟ್ಟೆ ಬಳಗದ ವತಿಯಿಂದ ಕೋವಿಡ್ ನಲ್ಲಿ ತೊಂದರೆಗಿಡಾದ ರೋಗಿಗಳಿಗೆ ಆಮ್ಲಜನಕ ಸರಬರಾಜು ಯಂತ್ರಗಳನ್ನು ಒದಗಿಸಿದ್ದಾರೆ.
ನಾಗರೀಕರ ಅನುಕೂಲಕ್ಕಾಗಿ, ಬಿಎಂಟಿಸಿಯ ಅನುಕೂಲಕ್ಕಾಗಿ. ಸುಂದರ ಸ್ವಸಜಿತವಾದ ಬಸ್ ಬೇ ನಿರ್ಮಾಣ. ಬಡಾವಣೆಯ ನಾಗರಿಕರ ಸೌಕರ್ಯಕ್ಕಾಗಿ ಎರಡು ಅಂಚೆ ಕಚೇರಿ ನಿರ್ಮಾಣ ಮಾಡಿರುವುದು. ನಾಗರೀಕರ ಅನುಕೂಲಕ್ಕಾಗಿ ಪ್ರಮುಖ ಸ್ಥಳಗಳಲ್ಲಿ ಅತ್ಯಾಧುನಿಕ ಸೌಲಭ್ಯ ಒದಗಿಸಿರುವುದು. ಬೆಂಗಳೂರಿನಲ್ಲಿ ಬಿಬಿಎಂಪಿ ವತಿಯಿಂದ ನೀಡಿದ್ದ ಗುತ್ತಿಗೆ ನೀಡಿದಂತಹ ನಿವೇಶನಗಳಿಗೆ ಮಾರುಕಟ್ಟೆಯ ದರದಲ್ಲಿ ತೆರಿಗೆ ವಿಧಿಸಿದ್ದನ್ನು (ಕನ್ನಡ ಸಂಘ ಸಂಸ್ಥೆಗಳಿಗೆ, ಕನ್ನಡ ಶಾಲೆಗಳಿಗೆ) ವಿರೋಧಿಸಿ ಬಿಬಿಎಂಪಿಯಲ್ಲಿ ನಿರ್ಣಯ ತಿಳಿದುಕೊಳ್ಳಲು ಒತ್ತಾಯ ಮಾಡಿ ನಂತರ ಸರ್ಕಾರದ ಮಟ್ಟದಲ್ಲಿ ಸುಮಾರು ಒಂದುವರೆ ವರ್ಷಗಳ ಕಾಲ ಸತತ ಪ್ರಯತ್ನದಿಂದ ಸಚಿವ ಸಂಪುಟದಲ್ಲಿ ಹಿಂದೆ ಯಾವ ಗುತ್ತಿಗೆ ದರದಲ್ಲಿ ನಿಗದಿ ಆಗಿತ್ತು ಅದೇ ದರದಲ್ಲಿ ಮುಂದುವರಿಸಲು ಮುಖ್ಯಮಂತ್ರಿಗಳವರಿಗೆ ಮನವರಿಕೆ ಮಾಡಿಕೊಟ್ಟು ಅನುಮೋದನೆ ದೊರಕಿಸಿಕೊಂಡಿರುವುದು ಕಟ್ಟೆ ಸತ್ಯ ಅವರ ಜನಪರ ಕೆಲಸಗಳಿಗೆ ಸಾಕ್ಷಿಯಾಗಿದೆ.
ಈ ಬಾರಿ ಬೆಂಗಳೂರಿನ ಬಸವನಗುಡಿ ವಿಧಾನ ಸಬಾ ಕ್ಷೇತ್ರದ ಚುನಾವಣೆಯಲ್ಲಿ ಕಟ್ಟೆ ಸತ್ಯ ಅವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಟ್ಟಿದ್ದೆ ಆದಲ್ಲಿ ಭರ್ಜರಿ ಜಯಗಳಿಸುವುದರ ಜೊತೆಗೆ ಮತ್ತಷ್ಟು ಜನರ ಸೇವೆ ಮಾಡಲು ಅನಕೂಲ ಆಗುತ್ತೆ ಅಂತ ಕ್ಷೇತ್ರದ ಜನ ಹೇಳುತ್ತಿದ್ಧಾರೆ. ಜನಾನುರಾಗಿ ನಾಯಕ ಕಟ್ಟೆ ಸತ್ಯ ಅವರನ್ನ ಬಸವನಗುಡಿ ಕ್ಷೇತ್ರದ ಜನ ಶಾಸಕರನ್ನಾಗಿ ನೋಡಲು ಬಯಸಿದ್ದಾರೆ.