ಕೋಲ್ಕತ್ತಾ: ಇತ್ತೀಚೆಗೆ ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್ ನಾಯಕ ಕೌಸ್ತವ್ ಬಾಗ್ಚಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ
ಕೌಸ್ತವ್ ಬಾಗ್ಚಿ ಅವರು ಶನಿವಾರ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ತಮ್ಮ ರಕ್ತದಿಂದ ಬರೆದ ಪತ್ರವನ್ನು ಪ್ರಧಾನಿ ಅವರಿಗೆ ಹಸ್ತಾಂತರಿಸಿದರು. ಪತ್ರದಲ್ಲಿ, ಪ್ರಧಾನಿ ಮೋದಿಯವರೇ ದಯವಿಟ್ಟು ಪಶ್ಚಿಮ ಬಂಗಾಳವನ್ನು ಕಳ್ಳರಿಂದ ರಕ್ಷಿಸಿ ಎಂದು ಬರೆಯಲಾಗಿದೆ. ಈ ಪತ್ರವನ್ನು ಸ್ವೀಕರಿಸಿದ ಮೋದಿಯವರು ಮತ್ತೆ ಇಂತಹ ಕೆಲಸಗಳನ್ನು ಮಾಡಬೇಡಿ ಎಂದು ಬಾಗ್ಚಿಗೆ ಬುದ್ಧಿ ಹೇಳಿದರು.
ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದ ಬಾಗ್ಚಿ, 2023ರಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಮಾತನಾಡಿದ್ದಕ್ಕೆ ಬಾಗ್ಚಿ ಕೋಲ್ಕತ್ತಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ನಂತರ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಸರ್ಕಾರ ಉರುಳಿಸುವವರೆಗೂ ತಲೆ ಕೂದಲು ಬೆಳೆಸುವುದಿಲ್ಲ ಎಂದು ಶಪಥ ಮಾಡಿ ತಲೆ ಬೋಳಿಸಿಕೊಂಡಿದ್ದರು