ಬೆಂಗಳೂರು: ನಗರದ ಕೆಸಿ ಜನರಲ್ (KC General) ಅಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ ಜಗತ್ತಿಗೆ ಬರುವ ಮುಂಚೆಯೇ ಕಂದಮ್ಮ ಕಣ್ಣು ಮುಚ್ಚಿದ ಘಟನೆಯೊಂದು ನಡೆದಿದೆ.
ಚೊಕ್ಕಸಂದ್ರದ ದೇವಿಕಾ ಎಂಬವರಿಗೆ 9 ತಿಂಗಳು ಭರ್ತಿಯಾಗಿ 12 ದಿನದ ಬಳಿಕ ಆಸ್ಪತ್ರೆ ವೈದ್ಯರು ಡೆಲಿವರಿಗೆ ಡೇಟ್ ಕೊಟ್ಟರು. ಆದರೆ ಡೇಟ್ ಮೀರಿದೆ ಸಿಜೇರಿಯನ್ ಮಾಡಿ ಅಂತಾ ಕುಟುಂಬಸ್ಥರು ಮನವಿ ಮಾಡಿದರೂ ವೈದ್ಯರು ಒಪ್ಪದೇ ನಾರ್ಮಲ್ ಗೆ ರೆಡಿ ಮಾಡಿದ್ದಾರೆ. ಬಳಿಕ ನಾರ್ಮಲ್ ಆಗಲ್ಲ ಸಿಜೇರಿಯನ್ ಮಾಡ್ತೀವಿ ಅಂತಾ ಹೇಳಿದ್ದಾರೆ. ಕೊನೆಗೆ ಮಗು ಗಲೀಜು ನೀರು ಕುಡಿದಾಗಿದ್ದು, ಮಗು ಸತ್ತು ಹೋಗಿದೆ ಎಂದು ತಿಳಿಸಿದ್ದಾರೆ.
ಇದಾದ ಬಳಿಕ ಆಸ್ಪತ್ರೆಯಲ್ಲಿ ಕುಟುಂಬಸ್ಥರು ಗಲಾಟೆ ನಡೆಸಿದ್ದು, ಆಕ್ರೋಶ ಹೊರಹಾಕಿ ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೇ ಮಗು ಸತ್ತು ಹೋದ ಮೇಲೆಯೂ ದುಡ್ಡು ಕೊಡಿ ಎಂದು ಆಸ್ಪತ್ರೆಯವರು ಕೇಳಿದ್ದಾರೆ. ಭಾನುವಾರ 10 ಗಂಟೆಗೆ ಮಹಿಳೆ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಸಂಜೆ 7 ಗಂಟೆಯವರೆಗೆ ಆಸ್ಪತ್ರೆಯವರು ಕಾಯಿಸಿದ್ದಾರೆ. ಒಂದು ವಾರದ ಹಿಂದೆ ನಾರ್ಮಲ್ ಆಗಲ್ಲ, ಸಿಜೇರಿಯನ್ ಆಗುತ್ತೆ ಎಂದಿದ್ದರು. ಆದರೆ ನಿನ್ನೆ ಬಂದ ಬಳಿಕ ನಾರ್ಮಲ್ ಆಗುತ್ತೆ ಎಂದು ಅಸ್ಪತ್ರೆಯವರು ಹೇಳಿದ್ದಾರೆ. ಕುಟುಂಬಸ್ಥರು ದಿನ ತುಂಬಿದೆ ಕಾಯಬೇಡಿ ಅಂದ್ರೂ ಆಸ್ಪತ್ರೆಯವರು ಕೇಳಲಿಲ್ಲ ಎಂದು ದೇವಿಕಾ ಕುಟುಂಬಸ್ಥರು ಆರೋಪಿಸಿದ್ದಾರೆ. ಲಂಚ ಲಂಚ ಅಂತಾ ಸಾಯ್ತಾ ಇದ್ದಾರೆ. ವೈದ್ಯರನ್ನು ಹೊರಗೆ ಕರೆಸುವಂತೆ ಗಲಾಟೆ ಮಾಡಿ ಆಕ್ರೋಶ ಹೊರಹಾಕಿದ ಕುಟುಂಬಸ್ಥರು, ಆಸ್ಪತ್ರೆಯೊಳಗೆ ನುಗ್ಗಲು ಯತ್ನಿಸಿದ್ದಾರೆ. ವೈದ್ಯರನ್ನು ಸಸ್ಪೆಂಡ್ ಮಾಡಿ ಅಂತಾ ಕಿಡಿಕಾರಿದ್ದಾರೆ