ಕನ್ನಡ ಚಲನಚಿತ್ರ ಕಪ್ ಗೆ ತೆರೆಬಿದ್ದಿದೆ. ಎರಡು ದಿನಗಳ ಕಾಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಧನಂಜಯ್ ನೇತೃತ್ವದ ಗಂಗಾ ವಾರಿಯಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಗಂಗಾ ವಾರಿಯರ್ಸ್ ಮತ್ತು ರಾಷ್ಟ್ರಕೂಟ ಪ್ಯಾಂಥರ್ಸ್ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಗಂಗಾ ವಾರಿಯರ್ಸ್ ಚಾಂಪಿಯನ್ ಆಗಿ ಕಪ್ ಅನ್ನು ಪಡೆದುಕೊಂಡಿದೆ.
ಎರಡು ದಿನಗಳ ಕಾಲ ನಡೆದ ಪಂದ್ಯಗಳಲ್ಲಿ ಆರು ತಂಡಗಳು ಭಾಗಿಯಾಗಿದ್ದವು. ತಲಾ ಎರಡು ಪಂದ್ಯಗಳನ್ನು ಆಡಿದವು. ಧನಂಜಯ್, ಗಣೇಶ್, ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ ಮತ್ತು ಧ್ರುವ ಸರ್ಜಾ ತಲಾ ಒಂದೊಂದು ತಂಡದ ನೇತೃತ್ವವಹಿಸಿದ್ದರು. ಸಿನಿಮಾ ನಟರು ಮತ್ತು ತಂತ್ರಜ್ಞರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಕೂಡ ಕನ್ನಡ ಚಲನಚಿತ್ರ ಕಪ್ ಪಂದ್ಯದಲ್ಲಿ ಭಾಗಿಯಾಗಿದ್ದರು.
ಈ ಸಲದ ಪಂದ್ಯಾವಳಿ ಹಲವು ವಿಶೇಷಗಳಿಂದ ಕೂಡಿತ್ತು. ಆಡಿದ ಎರಡು ಪಂದ್ಯಗಳನ್ನು ಧನಂಜಯ ಅಂಡ್ ಟೀಮ್ ಗೆದ್ದರೆ, ಶಿವರಾಜ್ ಕುಮಾರ್ ನೇತೃತ್ವದ ತಂಡ ಒಂದೇ ಒಂದು ಪಂದ್ಯವನ್ನೂ ಗೆಲ್ಲಲಾಗಲಿಲ್ಲ. ಉಳಿದ ಎಲ್ಲ ತಂಡಗಳು ಒಂದೊಂದು ಪಂದ್ಯವನ್ನು ಗೆಲ್ಲುವ ಮೂಲಕ ಟೋರ್ನಿಯನ್ನು ಮುಂದಕ್ಕೆ ಸಾಗುವಂತೆ ಮಾಡಿದವು. ಉಪೇಂದ್ರ ನಾಯಕತ್ವದ ತಂಡ ಅತೀ ಹೆಚ್ಚು ನೆಟ್ ರನ್ ರೇಟ್ ಹೊಂದಿತ್ತು.
ಫೈನಲ್ ತಲುಪಿದ್ದ ಗಂಗಾ ವಾರಿಯರ್ಸ್ ಮತ್ತು ವಿಜಯನಗರ ಪೇಟ್ರಿಯಾಟ್ಸ್ ಅತ್ಯುತ್ತಮವಾಗಿ ಆಡಿದವು. ಕೊನೆಗೂ ಧನಂಜಯ್ ನಾಯಕನಾಗಿದ್ದ ಗಂಗಾ ವಾರಿಯರ್ಸ್ ಚಾಂಪಿಯನ್ ಪಟ್ಟ ಪಡೆದುಕೊಂಡಿತು. ಈ ಗೆಲುವನ್ನು ತಂಡ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಿತು. ಅಲ್ಲದೇ, ಈ ಬಾರಿ ಇಡೀ ಕ್ರಿಕೆಟ್ ಪಂದ್ಯಾವಳಿಯನ್ನು ಅಪ್ಪುಗೆ ಅರ್ಪಿಸಿದ್ದು ವಿಶೇಷವಾಗಿ