ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಅವರು ಇಂದು ವಸಂತ ನಗರದ ತಮ್ಮ ನಿವಾಸದಲ್ಲಿ ಚುನಾವಣೆಯ ಪ್ರಣಾಳಿಕೆ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಕೆಜಿಎಫ್ ಬಾಬು, ಕ್ಷೇತ್ರದಲ್ಲಿ ಈಗಾಗ್ಲೆ 450 ಮನೆ ಕಟ್ಟಿಸ್ತಿದ್ದೇನೆ. ಮನೆ ನಿರ್ಮಾಣ ಕೆಲಸ ಸಂಪೂರ್ಣ ಮುಗಿದಿದೆ. ಚುನಾವಣೆ ಫಲಿತಾಂಶ ಬಂದ ನಂತರ ಹಕ್ಕು ಪತ್ರ ಕೊಡ್ತೇನೆ. ನಾನು ಚುನಾವಣೆ ಗೆದ್ದ ನಂತರ ಕ್ಷೇತ್ರದ ಜನತೆಗೆ 10 ಸಾವಿರ ಮನೆ ಕಟ್ಟಿಸಿ ಕೊಡ್ತೇನೆ. ಚಿಕ್ಕಪೇಟೆ ಕ್ಷೇತ್ರವನ್ನು ಸೀಟ್ ಮನೆ,
ಗುಡಿಸಲು ಮುಕ್ತ ಮಾಡ್ತೇನೆ. ಸಿಲಿಂಡರ್ ಗುರುತಿಗೆ ಓಟ್ ಹಾಕಿದ್ರೆ ಕಾಂಗ್ರೆಸ್ ಪಕ್ಷಕ್ಕೆ ಓಟ್ ಹಾಕಿದಂತೆ. ಕ್ಷೇತ್ರದ 6 ಜನ ಕಾರ್ಪೊರೇಟರ್ ಗಳು ನಮ್ಮ ಜೊತೆ ಇದ್ದಾರೆ. ಹಿಂದೂ- ಮುಸ್ಲಿಂ ಬೇದ ಭಾವ ಇಲ್ಲದೆ ಎಲ್ಲರೂ ನನ್ನ ಬೆಂಬಲಿಸಿ. ನಾನು ಸುಳ್ಳುಗಾರ ಅಲ್ಲ, ಮೋಸ ಮಾಡಿ ಓಟ್ ಪಡೆಯಲ್ಲ. ಅವಕಾಶ ಮಾಡಿಕೊಡಿ, ಅಭಿವೃದ್ಧಿ ನೋಡಿ ಎಂದರು. ಇನ್ನೂ ನಾನು ದುಡ್ಡು ಮಾಡಲು ಬಂದಿಲ್ಲ, ನನಗೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.
1- APL, BPL ಕಾರ್ಡ್ ದಾರರಿಗೆ ಸ್ವಂತ ಹಣದಲ್ಲಿ ಸ್ವಂತ ಮನೆ ನಿರ್ಮಾಣ
2- APL- BPL ಪ್ರತಿ ಮನೆಗೆ ಜೀವಿತಾವದಿವರೆಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ
3- SSLC, PUC, ಡಿಗ್ರೀ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್
4- ಪ್ರತೀ ಕುಟುಂಬಕ್ಕೆ 5 ಲಕ್ಷ ಆರೋಗ್ಯ ವಿಮೆ
5- ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು
6- ಪ್ರತೀ ಮನೆಗೆ ಉಚಿತ ಡಿಟಿಎಚ್ ಸಂಪರ್ಕ
7- ವಿಧ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಮಹಿಳೆಯರಿಗೆ ಗುಡಿಕೈಗಾರಿಕೆ ತರಬೇತಿ, ಸ್ವಂತ ಉದ್ದಿಮೆ ಸ್ಥಾಪನೆಗೆ ಸಹಾಯಧನ
8- ರಿಯಾಯಿತಿ ದರದಲ್ಲಿ ದಿನಸಿ ಪದಾರ್ಥಗಳನ್ನು ಮಾರಾಟ ಮಾಡುವ ಮಳಿಗೆ ಸ್ಥಾಪನೆ
9- ಸರ್ಕಾರದ ಅನುದಾನ ಹಾಗೂ ಯೋಜನೆಗಳನ್ನು ಕ್ಷೇತ್ರದ ಜನತೆಯ ಮುಂದೆ ಬಹಿರಂಗ ಚರ್ಚೆ, ಕಳಪೆ ಕಾಮಗಾರಿ ನಡೆಯದಂತೆ ಕ್ರಮ
10- ಮಾದರಿ ಕ್ಷೇತ್ರವಾಗಿ ಮಾಡಿ ಇತಿಹಾಸ ನಿರ್ಮಾಣ
11- ನಾಗರೀಕರಿಗೆ ಸೌಲಭ್ಯ ಒದಗಿಸಲು ವಿಶೇಷ ಕಛೇರಿ, ವೆಬ್ ಸೈಟ್ ಆ್ಯಪ್ ನಿರ್ಮಾಣ
12- ಚಿಕ್ಕಪೇಟೆ ಕ್ಷೇತ್ರದ ಟ್ಯಾಂಕ್ ಗಾರ್ಡನ್, ಸಿದ್ದಾಪುರ, ಬಿಟಿಬಿ ಏರಿಯಾ, LIC ಕಾಲೋನಿ,ರಾಜಣ್ಣ ಲೇಔಟ್, BHEL ಲೇಔಟ್, ಚಿನ್ನಯ್ಯನ ಪಾಳ್ಯ, ನಿವಾಸಿಗಳಿಗೆ ಒಂದುಮುಕ್ಕಾಲು ಎಕರೆ ಸ್ಮಶಾನ ಜಾಗ ನೀಡಲಾಗುವುದು, ಮೇ 15, 2023 ರಂದು ಜಮೀನು ಹಸ್ತಾಂತರ
13- ಕೃಷ್ಣಪ್ಪ ಗಾರ್ಡನ್ ನ ಹುಸ್ಮಾ ಮಸೀದಿಗೆ ಜಮೀನು ಖರೀದಿಗೆ ಧನ ಸಹಾಯ, ನೀತಿ ಸಂಹಿತೆ ಮುಗಿದ ನಂತರ ಧನ ಸಹಾಯ
14- ಕ್ಷೇತ್ರದ ವಿವಿಧ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಗೆ ಸಹಾಯ, ಧಾರ್ಮಿಕ ಕೇಂದ್ರಗಳಿಗೆ 86.40 ಕೋಟಿ ಅನುದಾನ
15- ಹಿಂದೂ ಸಮಾಜದ ರುದ್ರಭೂಮಿಗೆ 2 ಎಕರೆ ಭೂಮಿ ನೀಡಲಾಗುವುದು, ಇದನ್ನು ನೀತಿ ಸಂಹಿತೆ ಮುಗಿದ ನಂತರ ಹಸ್ತಾಂತರ