ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದ ಕುರಿತಾಗಿ ಒಂದಲ್ಲ ಒಂದು ಸುದ್ದಿಗಳು ಕೇಳಿ ಬರುತ್ತಲೆ ಇದೆ. ಬಿಗ್ ಪ್ರೋಜೆಕ್ಟ್ ನ ರಾಮಾಯಣ ಸಿನಿಮಾದಲ್ಲಿ ಸಾಕಷ್ಟು ಸ್ಟಾರ್ ಕಲಾವಿದರು ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ಕ್ಯಾರೆಕ್ಟರ್ ಕಾಸ್ಟೂಮ್ ಡಿಸೈನ್ ಕೆಲಸ ಶುರುವಾಗಿದ್ದು ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ ರಿಯಲ್ ಗೋಲ್ಡ್ ಧರಿಸುತ್ತಿದ್ದಾರಂತೆ.
ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಳತಿದ್ದಾರೆ. ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅಸಲಿ ಚಿನ್ನ ಬಳಕೆ ಮಾಡಿರೋ ಕಾಸ್ಟೂಮ್ಗಳನ್ನೆ ಧರಿಸಲಿದ್ದಾರೆ.ಈ ಹಿಂದೆ ಕೆಜಿಎಫ್ ಸಿನಿಮಾದಲ್ಲಿ ಯಶ್ ನಕಲಿ ಗೋಲ್ಡ್ ಧರಿಸಿದ್ದರು.
ಡೈರೆಕ್ಟರ್ ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ರಿಯಲ್ ಗೋಲ್ಡ್ ಬಳಕೆ ಆಗುತ್ತಿದೆ. ವಿಶೇಷವಾಗಿ ರಾವಣನ ಪಾತ್ರದ ಕಾಸ್ಟೂಮ್ ಹೆಚ್ಚು ಸದ್ದು ಮಾಡುತ್ತಿವೆ. ಕಾರಣ, ಈ ಒಂದು ಪಾತ್ರದ ಕಾಸ್ಟೂಮ್ಗೆ ರಿಯಲ್ ಗೋಲ್ಡ್ ಬಳಕೆ ಅಗುತ್ತಿದೆ ಅನ್ನೋ ಮಾಹಿತಿ ಹರಿದಾಡುತ್ತಲೇ ಇದೆ.
ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಏನೂ ಹೊರಬಂದಿಲ್ಲ. ಈ ಚಿತ್ರದ ಕಾಸ್ಟೂಮ್ ಡಿಸೈನ್ ಅನ್ನ ಹೆಸರಾಂತ ಡಿಸೈನ್ರಗಳೇ ಮಾಡುತ್ತಿದ್ದಾರೆ.
ಪದ್ಮಾವತ್ ಚಿತ್ರದ ಕಾಸ್ಟೂಮ್ ಸಖತ್ ರಿಚ್ ಆಗಿತ್ತು. ಡಿಸೈನರ್ ರಿಂಪಲ್ ಮತ್ತು ಹರಪ್ರೀತ್ ಅವರೇ ನಿತೇಶ್ ತಿವಾರಿ ಅವರ ರಾಮಾಯಣ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಿರ್ವಹಿಸ್ತಿರೋ ರಾವಣನ ಪಾತ್ರಕ್ಕೆ ಇವರೇ ಕಾಸ್ಟೂಮ್ ಡಿಸೈನ್ ಮಾಡುತ್ತಿದ್ದಾರೆ. ಈ ಮೂಲಕ ಕಾಸ್ಟೂಮ್ನ ಪ್ರತಿ ಪೀಸ್ನಲ್ಲೂ ಚಿನ್ನದ ಬಳಕೆ ಆಗುತ್ತಿದೆ ಅನ್ನೋ ಮಾಹಿತಿ ಇದೆ.
ರಾವಣನ ಆಳುತ್ತಿದ್ದ ಲಂಕೆಯನ್ನ ಗೋಲ್ಡನ್ ಸಿಟಿ ಅಂತಲೂ ಕರೆಯುತ್ತಾರೆ. ಹಾಗಾಗಿಯೇ ಸಿನಿಮಾದಲ್ಲಿ ರಾವಣನ ಪಾತ್ರಧಾರಿ ಯಶ್ ಧರಿಸೋ ಪ್ರತಿ ಕಾಸ್ಟೂಮ್ನಲ್ಲೂ ಗೋಲ್ಡ್ ಇರುತ್ತದೆ ಅನ್ನುವ ಮಾಹಿತಿ ಇದೆ. ಇದರೊಟ್ಟಿಗೆ ರಾವಣನ ಪಾತ್ರಕ್ಕೆ ಗೋಲ್ಡನ್ ಕಾಸ್ಟೂಮ್ ಹಾಕಿ ಆ ರಿಯಾಲಿಟಿಯನ್ನ ತೆರೆ ಮೇಲೆ ತರೋ ಪ್ರಯತ್ನ ನಡೆಯುತ್ತಿದೆ ಅನ್ನುವ ಸುದ್ದಿ ಕೂಡ ಇದೆ.
ರಾವಣನ ಪಾತ್ರವಷ್ಟೇ ಅಲ್ಲದೇ, ಸಿನಿಮಾದ ಇತರ ಪಾತ್ರಗಳಿಗೂ ರಿಂಪಲ್ ಮತ್ತು ಹರಪ್ರೀತ್ ಡಿಸೈನ್ ಮಾಡುತ್ತಿದ್ದಾರೆ. 850 ಕೋಟಿ ಬಜೆಟ್ನ ಈ ರಾಮಾಯಣದಲ್ಲಿ ರಾಮನಾಗಿ ರಣಬೀರ್ ಕಪೂರ್ ಇದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಲಾರಾ ದತ್ತಾ ಇಲ್ಲಿ ಕೈಕೇಯಿ ಪಾತ್ರ ಮಾಡುತ್ತಿದ್ದಾರೆ. ರಾಮಾಯಣ ಸೀರಿಯಲ್ನ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಇಲ್ಲಿ ರಾಜಾ ದಶರಥನ ಪಾತ್ರ ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಇದೆ.