ರಾಜ್ಯ ಸರ್ಕಾರದ ಪ್ರತಿಷ್ಠೆಯ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು (Shakti Yojana) ಸರ್ಕಾರ ಜಾರಿಗೆ ಮಾಡಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರ ಗ್ಯಾಂಗ್ ಈಗ ಪುಲ್ ಆ್ಯಕ್ಟಿವ್ ಆಗಿದ್ದು, ಮಹಿಳೆಯರು ಓಡಾಟ ಮಾಡುವ ಬಸ್ಗಳನ್ನು ಟಾರ್ಗೆಟ್ ಮಾಡಿಕೊಂಡು ತಮ್ಮ ಕಳ್ಳತನದ ಕಸಬು(The crime of theft) ಆರಂಭಿಸಿದ್ದಾರೆ. ಅರೇ ಯಾವ ಜಿಲ್ಲೆಯಲ್ಲಿ ಈ ಗ್ಯಾಂಗ್ ಆಕ್ಟಿವ್ ಆಗಿದೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.
ಒಂದು ಕಡೆ ಕಣ್ಣು ಹಾಯಿಸದ್ಲೇಲ್ಲ ಕಣ್ಣಿಗೆ ಬಿಳುವ ಮಹಿಳಾ ಪ್ರಯಾಣಿಕರು. (Female passengers)ಮತ್ತೊಂದು ಕಂಡೆ ಶಕ್ತಿಯೋಜನೆಯಡಿ ಮಹಿಳಾ ಪ್ರಯಾಣಿಕರು ತುಂಬಿ ಹೋಗುತ್ತಿರುವ ಸರ್ಕಾರಿ ಸಾರಿಗೆ ಬಸ್ಗಳು. ಮಗದೊಂದು ಕಡೆ ಪ್ರಿ ಸಾರಿಗೆ ಬಸ್ ಯೋಜನೆಯಡಿ ಬಸ್ ಸೀಟ್ಗಾಗಿ ಬಸ್ಸಿನ ಒಳಗೆ ನುಗ್ಗುತ್ತಿರುವ ಮಹಿಳೆಯರು ಈ ಎಲ್ಲ ದೃಶ್ಯ ಕಂಡು ಬಂದಿರುವದು ವಿಜಯಪುರದ ಕೇಂದ್ರ ಬಸ ನಿಲ್ದಾಣದಲ್ಲಿ. ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿ ದಿಲ್ಶಾದ್ ಬಳ್ಳಾರಿಯವರು, ಹೊಸದೊಂದು ನ್ಕಲೇಸ್ ಖರೀದಿಸಿ ತಮ್ಮ ಬ್ಯಾಗನಲ್ಲಿ ಭದ್ರವಾಗಿ ಇಟ್ಟುಕೊಂಡು,
ಸರ್ಕಾರಿ ಬಸ್ಸಿಗಾಗಿ ನಗರ ಕೇಂದ್ರ ಬಸ್ಸ ನಿಲ್ದಾಣಕ್ಕೆ ಬಂದಿದ್ದರು. ಬಸ್ಸ ಬಂದ ನಂತರ ಬಸ್ಸಿನ ಸೀಟ್ಗಾಗಿ ನುಗ್ಗುತ್ತಿರುವ ಸಂದರ್ಭದಲ್ಲಿ ದಿಲಶಾದ್ ಬ್ಯಾಗ್ನಲ್ಲಿದ್ದ ನಕ್ಲೇಸ್ ಎಗ್ಗರಿಸಿ ಖದೀಮ ಕಳ್ಳ ಕಾಲ್ಕಿತ್ತಿದ್ದಾನೆ. ಬಸ್ಸಿನ ಒಳಗೆ ಹೋಗಿ ನೋಡಿದಾಗ ನಕ್ಲೇಸ್ ಕಾಣದಿರುವು ಗಾಬರಿಗೊಂಡ ಮಹಿಳೆಯು ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಘಟನೆಯಿಂದ ಭಯಗೊಂಡ ಕುಟುಂಬಸ್ಥರು ಬಂದು ಘಟನೆಯ ಕುರಿತು ಮಾಹಿತಿ ಪಡೆದುಕೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಈ ಕುರಿತು ಕುಟುಂಬಸ್ಥರು ಪೊಲೀಸ್ ಠಾಣೆಯ ಮಟ್ಟಿಲು ಹತ್ತಿದ್ದು, ನ್ಯಾಯ ದೊರಕಿಸಿಕೊಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ..
ದಿಲ್ಸಾದ್ ಬಳ್ಳಾರಿಯವರು 1 ಲಕ್ಷ 30 ಸಾವಿರ ರೂಪಾಯಿ ನಕ್ಲೆಸ್ ಕಳೆದುಕೊಂಡಿದ್ದು, ಇದೇ ರೀತಿಯಾಗಿ ವಿಜಾಪುರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬಳ್ಳಾರಿ ಕುಟುಂಬಸ್ಥರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರದ ಶಕ್ತಿ ಯೋಜಮೆಯ ಜಾರಿ ನಂತರ ಬಸ್ಸನಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಾಗಿರುವುದನ್ನು ನೋಡಿಕೊಂಡು ಕಳ್ಳರು ಕಳ್ಳತನ ಮಾಡುತ್ತಿದ್ದಾರೆ. ಮಹಿಳೆಯರ ಆಭರಣ ಹಾಗೂ ಫರ್ಸ್ಗಳನ್ನು ಕಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆ. ಪ್ರಯಾಣಿಕರ ಸೋಗಿನಲ್ಲಿ ಬಂದು ಮಹಿಳೆಯರ ಒಡವೆ, ನಗದು,
ಹಾಗೂ ಆಭರಣ ಕಳತನವಾಗುತ್ತಿವೆ ಎಂದು ಹೇಳಲಾಗುತ್ತಿವೆ. ಪೊಲೀಸರು ಕೇಂದ್ರ ಬಸ್ ನಿಲ್ದಾಣದಲ್ಲಿ ಭದ್ರತೆ ಹೆಚ್ಚು ಮಾಡಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ… ಇನ್ನೂ ಇದೇ ರೀತಿ ಹಲವು ಪ್ರಕರಣಗಳು ವಿಜಯಪುರದಲ್ಲಿ ನಡೆದಿದ್ದು, ಪೊಲೀಸರು ಈ ಕಳ್ಳರ ಗ್ಯಾಂಗ ಹೆಡೆಮುರಿ ಕಟ್ಟಲು ಬಲೆ ಬೀಸಿದ್ದಾರೆ. ಒಟ್ಟಿನಲ್ಲಿ ಶಕ್ತಿಯೋನೆಯ ಸೈಡ್ ಎಫೆಕ್ಟ್ ಒಂದೊಂದಾಗಿ ಜಿಲ್ಲೆಯಲ್ಲಿ ಕಂಡು ಬರುತ್ತಿದ್ದು, ಇದೇ ಯೋಜನೆಯ ಮಹಿಳಾ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿರುವ ಗ್ಯಾಂಗನ್ನು ಪೊಲೀಸರು ಪತ್ತೆ ಮಾಡಿ ಕಂಬಿ ಹಿಂದೆ ತಳ್ಳಬೇಕಾಗಿದೆ.