ನಾಗಮಂಗಲದಲ್ಲಿ ಮತ್ತೆ ಕೋಮು ಘರ್ಷಣೆಗೆ ಅವಕಾಶ ಮಾಡಿಕೊಡದಂತೆ ಪೊಲೀಸರಿಗೆ ಸರ್ಕಾರ ಖಡಕ್ ಸೂಚನೆ ನೀಡಿದೆ. ಭಾನುವಾರದಿಂದಲೇ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಅವರು ನಾಗಮಂಗಲದಲ್ಲೇ ಮೊಕ್ಕಾಂ ಹೂಡಿದ್ದಾರೆ. ಭದ್ರತೆ ಹಾಗೂ ಪರಿಸ್ಥಿತಿ ನಿಯಂತ್ರಣದ ಬಗ್ಗೆ ಗೃಹ ಇಲಾಖೆಗೆ ಗಂಟೆ ಗಂಟೆಗೂ ಮಾಹಿತಿ ನೀಡಲಾಗುತ್ತಿದೆ ಎಂದರು.
ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ನಾಗಮಂಗಲದ ಗಲ್ಲಿಗಲ್ಲಿಗಳಲ್ಲೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೊನ್ನೆ ಗಲಭೆಗೆ ಕಾರಣವಾದ ದರ್ಗಾ, ಮಸೀದಿ ಬಳಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಮಂಡ್ಯ ಸರ್ಕಲ್, ಈದ್ಗಾ ಮೈದಾನದ ಸುತ್ತಲೂ ಭಾರೀ ಬಂದೋ ಬಸ್ತ್ ಇದೆ.
2 ಎಸ್ಪಿ, 2 ಎಎಸ್ಪಿ, 4 ಡಿವೈಎಸ್ಪಿ, 20ಕ್ಕೂ ಹೆಚ್ಚು ಇನ್ಸ್ಪೆಕ್ಟರ್, 20ಕ್ಕೂ ಹೆಚ್ಚು ಪಿಎಸ್ಐ ಭದ್ರತೆಗೆ ನಿಯೋಜಿಸಲಾಗಿದೆ. ಅಲ್ಲದೇ ತಲಾ 7 ಡಿಎಆರ್, ಕೆಎಸ್ಆರ್ಪಿ ಸೇರಿದಂತೆ 700ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಈದ್ ಮಿಲಾದ್ ಹಿನ್ನೆಲೆಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ