ಬೆಂಗಳೂರು:- ನಗರದ ಎಂ.ಜಿ. ರಸ್ತೆಯ ಜಾಯ್ ಅಲುಕ್ಕಾಸ್ ಮಳಿಗೆಯಲ್ಲಿ ಗ್ರಾಹಕನ ಸೋಗಿನಲ್ಲಿ ಬಂದು ದುಬಾರಿ ಡೈಮಂಡ್ ಉಂಗುರ ಕಳ್ಳತನ ಮಾಡಿದ ಘಟನೆ ಜರುಗಿದೆ.
ಖದೀಮ ಡೂಪ್ಲಿಕೇಟ್ ಉಂಗುರ ಇಟ್ಟು ಒರಿಜಿನಲ್ ಡೈಮಂಡ್ ಉಂಗುರ ಕದ್ದು ಪರಾರಿಯಾಗಿದ್ದಾನೆ. ಬರೋಬ್ಬರಿ 75 ಲಕ್ಷ ಮೌಲ್ಯದ ಡೈಮಂಡ್ ಉಂಗುರ ಕಳ್ಳತನವಾಗಿದೆ. ಗ್ರಾಹಕನ ಸೋಗಿನಲ್ಲಿ ಬಂದು ಡೈಮಂಡ್ ಉಂಗುರ ಕದ್ದ ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಫೆಬ್ರವರಿ 18 ರಂದು ಗ್ರಾಹಕನ ಸೋಗಿನಲ್ಲಿ ಜಾಯ್ ಅಲುಕ್ಕಾಸ್ ಮಳಿಗೆಗೆ ಎಂಟ್ರಿ ಕೊಟ್ಟ ಖದೀಮ ಡೈಮಂಡ್ ಉಂಗುರ ಕದ್ದಿದ್ದಾನೆ. ಇನ್ನು ಈ ಕಳ್ಳ ನಗರದ ಹಲವೆಡೆ ಆಭರಣ ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕಬ್ಬನ್ ಪಾರ್ಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಡೈಮಂಡ್ ಕಳ್ಳನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.