ಬೆಂಗಳೂರು:- ಜೈಲಲ್ಲಿ ಪರಿಚಯ, ಹೊರಗಡೆ ಬಂದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಆರೋಪಿಗಳನ್ನು ಪೀಣ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ .
ಡ್ರಗ್ ತಗೋತಿದ್ರು ಮೂರ್ನಾಲ್ಕು ಫ್ಲೋರ್ ಮನೆ ಹತ್ತಿ ಕನ್ನ ಹಾಕ್ತಿದ್ರು.
ಪೀಣ್ಯಾ ಪೊಲೀಸರಿಂದ ಮನೆ ಕಳ್ಳತನ ಮಾಡ್ತಿದ್ದ ಖತರ್ನಾಕ್ ಆರೋಪಿಗಳನ್ನು ಬಂಧಿಸಲಾಗಿದೆ. ಗೌತಮ್ ಶೆಟ್ಟಿ, ಶೀಬಾ, ಮಾಣಿಕ್ಯ, ದಯಾನಂದ, ನರಸಿಂಹ ನಾಯಕ ಬಂಧಿತ ಆರೋಪಿಗಳು.
ಮರ್ಡರ್ ಕೇಸ್ ವೊಂದರಲ್ಲಿ ಗೌತಮ್ ಶೆಟ್ಟಿ ಜೈಲು ಸೇರಿದ್ದರು. ಈ ವೇಳೆ ರಾಬರಿ ಕೇಸ್ ನಲ್ಲಿ ಒಳಗಿದ್ದ ಮಾಣಿಕ್ಯನ ಪರಿಚಯ ಆಗಿತ್ತು. ಬೇಲ್ ಕೊಡಿಸೋಕೆ ಯಾರೂ ಇಲ್ಲ ಅಂತಾ ಮಾಣಿಕ್ಯ ಕಷ್ಟ ಹೇಳ್ಕೊಂಡಿದ್ದ. ಹೊರಗಡೆ ಬಂದಮೇಲೆ ಗೆಳೆಯನಿಗಾಗಿ ಗೌತಮ್ ಶೆಟ್ಟಿ ಬೇಲ್ ಕೊಡಿಸಿದ್ದ. ಹೊರಗಡೆ ಬಂದವರೇ ಮನೆ ಕಳ್ಳತನ ಶುರು ಮಾಡಿದ್ದರು.
ಗೌತಮ್ ಶೆಟ್ಟಿ ಪತ್ನಿ ಸೀಬಾ ಜೊತೆ ಸೇರಿ ರೌಂಡ್ಸ್ ಹಾಕ್ತಿದ್ದರು. ಹೈಫೈ ಏರಿಯಾ.. ಮೂರ್ನಾಲ್ಕು ಫ್ಲೋರ್ ಇರೋ ಅಪಾರ್ಟ್ಮೆಂಟ್ ಗಳೇ ಟಾರ್ಗೆಟ್ ಆಗಿವೆ. ನಂತರ ಎಲ್ಲರೂ ಸೇರಿ ಅಪಾರ್ಟ್ಮೆಂಟ್ ಗಳು, ಮನೆಗಳಿಗೆ ನುಗ್ಗಿ ಕಳ್ಳತನ ಆಗಿದೆ.
ಮನೆಯಲ್ಲಿದ್ದ ಚಿನ್ನಾಭರಣ, ಹಣ ಸೇರಿ ಹಲವು ವಸ್ತುಗಳನ್ನು ಕಳ್ಳರು ಕದೀತಿದ್ದರು. ಡ್ರಗ್, ಗಾಂಜಾದಂತ ಸೇವಿಸಿ ನಶೆಯಲ್ಲಿ ಕೃತ್ಯ ಎಸಗುತ್ತಿದ್ದರು.
ಬೆಂಗಳೂರಿನ ಹಲವು ಠಾಣಾ ವ್ಯಾಪ್ತಿಯಲ್ಲಿ ಈ ಗ್ಯಾಂಗ್ ಕೃತ್ಯ ಎಸಗಿದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 21ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ಆರೋಪಿಗಳ ಮೊಬೈಲ್ ಜಪ್ತಿ ಮಾಡಲಾಗಿದೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪೀಣ್ಯಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.