ಹಾಸನ: ಗ್ರಾಹಕರ ಸೋಗಿನಲ್ಲಿ ಬಂದ ಚಾಲಾಕಿ ಕಳ್ಳಿಯರು ಚಿನ್ನಾಭರಣ ಎಗರಿಸಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಆರ್ ಆರ್ ಗೋಲ್ಡ್ ಪ್ಯಾಲೇಸ್ನಲ್ಲಿ ಘಟನೆ ನಡೆದಿದೆ. ಬುರ್ಖಾ ಧರಿಸಿ ಮಾರುವೇಶದಲ್ಲಿ ಬಂದು ಲಕ್ಷಾಂತರ ಮೌಲ್ಯದ ಚಿನ್ನವನ್ನು ಕಳ್ಳತನ ಮಾಡಿರುವ ಘಟನೆ ಮಧ್ಯಾಹ್ನ 2-45ಕ್ಕೆ ನಡೆದಿದೆ.
ಚಿನ್ನದಂಗಡಿಗೆ ಬಂದಿದ್ದ ನಾಲ್ವರು ಮಹಿಳೆಯರು ಸುಮಾರು 6.91 ಲಕ್ಷ ಮೌಲ್ಯದ 94.715 ಗ್ರಾಂ ತೂಕದ ಚಿನ್ನಾಭರಣ ಗಳನ್ನು ದೋಚಿ ಪರಾರಿ ಆಗಿದ್ದಾರೆ. ಓಲೆ ಹಾಗೂ ಮಾಂಗಲ್ಯ ಸರ ಬೇಕೆಂದು ಬಂದಿದ್ದ ಖತರ್ನಾಕ್ ಕಳ್ಳಿಯರು ಸೇಲ್ಸ್ ಮನ್ ಕಣ್ಣುತಪ್ಪಿಸಿ ಎಗರಿಸಿದ್ದಾರೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.