ಬೆಂಗಳೂರು: ಕಿಚ್ಚ ಸುದೀಪ್ ಬಿಜೆಪಿ ಪರವಾಗಿ ಪ್ರಚಾರ ಮಾಡಿದಾಗಿನಿಂದ ಸುದ್ದಿಯಲ್ಲಿದ್ದಾರೆ. ಅದರಲ್ಲೂ ‘ಬೊಮ್ಮಾಯಿ ಮಾಮ’ ಪರವಾಗಿ ಪ್ರಚಾರ ಮಾಡಿದಾಗಿನಿಂದ ಹಿಡಿದು ಅವರ ಈ ನಡೆಯ ಬಗ್ಗೆ ಪರ ವಿರೋಧಗಳು ಕೇಳಿ ಬರುತ್ತಿದ್ದವು. ಇಂದು ರಾಜ್ಯದ ಭವಿಷ್ಯ ನಿರ್ಧಾರ ಆಗುವ ದಿನ ಆಗಿದ್ದು ಕಿಚ್ಚ ಸುದೀಪ್ ಪುಟ್ಟೇನಹಳ್ಳಿ ಆಕ್ಸ್ಫರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಸಂದರ್ಭ ಅವರು ತಮ್ಮ ಮಗಳ ಪ್ರಥಮ ಮತದಾನದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಂದರ್ಭ ಮಾತನಾಡಿದ ಕಿಚ್ಚ “ನನ್ ಮಗಳು ಫಸ್ಟ್ ಟೈಮ್ ವೋಟ್ ಮಾಡ್ತಿದಾಳೆ. ರೋಡ್ ತುಂಬಾ ವೀಡಿಯೋ ಮಾಡ್ತಾ ಬಂದೆ. ನನ್ನ ಮಗಳು ಏನೆ ಮಾಡಿದ್ರು ಅದನ್ನ ವೀಡಿಯೋ ಮಾಡಿ ಸೆಲೆಬ್ರೇಟ್ ಮಾಡ್ತೀನಿ, ಯಂಗ್ಸ್ಟರ್ಗಳು ಕಲವ್ರು ಬಂದಿಲ್ಲ, ಅವರೂ ಬರ್ತಾರೆ ಬಿಡಿ. ಅದೇ ಊರಲ್ಲಿ ಹೋಗಿ ಮೈಕ್ ಹಾಕ್ಕೊಂಡ್ ನಿತ್ಕೊಂತಿನಿ. ನಾನು ಕ್ಯಾಂಪೇನ್ ಮಾಡಿರೋ ಜಾಗದಲ್ಲಿ ಬದಲಾವಣೆಗಳು ಆಗಬೇಕು. ನಾನು ಟೀಮ್ನಲ್ಲಿ ಆಟಗಾರ ಆಗಿರಬೇಕು. ಕ್ಯಾಪ್ಟನ್,ಉಪಮುಖ್ಯಂಮತ್ರಿ ಆಗಲ್ಲ. ರಮ್ಯಾ ನನ್ನ ಫ್ರೆಂಡ್. ಮುಂದೆ ರಾಜಕೀಯ ಇಷ್ಟ ಆದ್ರೆ ಬರ್ತೀನಿ” ಎಂದಿದ್ದಾರೆ.