ಸ್ಯಾಂಡಲ್ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಸಿನಿಮಾ, ಬಿಗ್ ಬಾಸ್, ಐಪಿಲ್ ಅಂತ ಸಖತ್ ಬ್ಯುಸಿಯಾಗಿರುವ ಸುದೀಪ್ ಅಂದ್ರೆ ಎಲ್ರಿಗೂ ಅಚ್ಚು ಮೆಚ್ಚು. ಸದಾ ಸಖತ್ ಆಕ್ಟೀವ್ ಆಗಿರುವ ಕಿಚ್ಚ ಇದೀಗ ಪ್ರಚಲಿತ ಕಂಪನಿಯೊಂದರ ರಾಯಭಾರಿ ಆಗಿದ್ದಾರೆ.
ಯೆಸ್. ಇನ್ಮುಂದೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎಂಬುದ್ದನ್ನು ಸುದೀಪ್ ಅವರೇ ಹೇಳಲಿದ್ದಾರೆ. ಅಂದ್ರೆ ಸುದೀಪ್ ಕಂಚಿನ ಕಂಠದಿಂದ ಇನ್ಮುಂದೆ ಆ ಕಂಪನಿ ಹಣಕಾಸಿನ ವ್ಯವಹಾರಗಳ ಕಂಪ್ಲೀಟ್ ಡಿಟೈಲ್ಸ್ ದೊರೆಯುತ್ತದೆ. ಹೌದು, ಕಿಚ್ಚ ಸುದೀಪ್ ಧ್ವನಿ ಇನ್ಮೇಲೆ ಫೋನ್ ಪೇ ಸ್ಪೀಕರ್ಗಳಲ್ಲಿ ಕೇಳಿ ಬರಲಿದೆ.
ಕಿಚ್ಚ ಸುದೀಪ್ ಜೊತೆಗೆ ಫೋನ್ ಪೇ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಕಿಚ್ಚನ ವಾಯ್ಸ್ ಸ್ಯಾಂಪಲ್ ತೆಗೆದುಕೊಂಡು ಹೋಗಲಾಗಿದೆ. ‘ಒಂದು ರೂಪಾಯಿ ಫೋನ್ ಪೇ ಸ್ವೀಕರಿಸಲಾಗಿದೆ ಧನ್ಯವಾದಗಳು’ ಅನ್ನೋ ಸಾಲನ್ನ ಕಿಚ್ಚನಿಂದ ಹೇಳಿಸಲಾಗಿದೆ.
ನೀವು ಯಾರಿಗೆ ಹಣ ಕಳುಹಿಸಿದ್ರು, ಯಾವುದೇ ಅಂಗಡಿಯಲ್ಲಿ ಶಾಪಿಂಗ್ ಮಾಡಿ ಫೋನ್ ಪೇ ಮೂಲಕ ಹಣ ಕಳುಹಿಸಿದರು ಎಷ್ಟು ಕಳುಹಿಸಲಾಗಿದೆ ಎಂಬುದನ್ನು ಸುದೀಪ್ ಸ್ವರದಲ್ಲಿ ಕೇಳಿಬರಲಿದೆ. ಆದರೆ ಸುದೀಪ್ ಧ್ವನಿ ಯಾವಾಗಿನಿಂದ ಕೇಳಲಿದೆ ಅನ್ನೋ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.