ಬೆಂಗಳೂರು : ಅಭಿನಯ ಚಕ್ರವರ್ತಿ ನಟ ಸುದೀಪ್ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಬಿರು ಬಿಸಿಲಿನ ನಡುವೆಯೂ ಕೊಂಚವು ವಿರಮಿಸಿದೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಇದೀಗ ಇದ್ದಕ್ಕಿದ್ದಂತೆ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ ಎಂದು ಹೇಳಲಾಗಿದೆ.
ಇದಕ್ಕೆ ಕಾರಣ ಹೌದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮಾತು ಎನ್ನಲಾಗುತ್ತಿದೆ. ಡಿಕೆಶಿ ಅವರು ಕಿಚ್ಚ ಸುದೀಪ್ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಾರೆ ಅಂತ ಹೇಳಿದ್ದರು.. ಇದೀಗ ನಿನ್ನೆ ಮಧ್ಯಾಹ್ನದಿಂದ ಕಿಚ್ಚ ಕಮಲದ ಪರ ಪ್ರಚಾರ ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ. ಇಂದಿನ ಪ್ರಚಾರಕ್ಕೂ ಬ್ರೇಕ್ ಹಾಕಿದ್ದಾರೆ. ಮಾತಿಗೆ ಸದಾ ಬದ್ದರಾಗಿರುವ ಅವರು ದಿಢೀರನೆ ಪ್ರಚಾರ ನಿಲ್ಲಿಸಿದ್ದೆಕೆ ಎನ್ನುವ ಅನುಮಾನ ಮೂಡಿದೆ.
ನಾನು ಬೊಮ್ಮಾಯಿ ಮಾಮನ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ಘೋಷಣೆ ಮಾಡಿದಂತೆ ಸುದೀಪ್ ಬಿಜೆಪಿ ಪಕ್ಷದ ಪರ ಪ್ರಚಾರಕ್ಕೆ ಸೀಮಿತವಾಗಿದ್ದರು. ಅಲ್ಲದೆ, ಅವರಿಗೆ ಕಾಂಗ್ರೆಸ್ನಿಂದ ಪ್ರಚಾರಕ್ಕೂ ಸಹ ಆಹ್ವಾನ ಬಂದಿತ್ತು. ಅಲ್ಲದೆ, ಕೈ ಪಾಳಯದಲ್ಲಿಯೂ ಅವರ ಸ್ನೇಹಿತ ಅಭ್ಯರ್ಥಿಗಳ್ಳಿದ್ರು. ಆದ್ರೂ ಸಹ ಕಿಚ್ಚ ಬಿಜೆಪಿ ಪರ ನಿಂತು ಶಿಗ್ಗಾವಿ ಸೇರಿದಂತೆ 18 ಕ್ಷೇತ್ರ ಸುತ್ತಾಡಿ ಲಕ್ಷಾಂತರ ಅಭಿಮಾನಿಗಳ ನಡುವೆ ಹಗಲು ರಾತ್ರಿ ಪ್ರಚಾರ ಮಾಡಿದರು.
ನಿಗದಿ ಪ್ರಕಾರ ಸುದೀಪ್ ಇಂದು ಹುಬ್ಬಳ್ಳಿ, ರೋಣದಲ್ಲೂ ರೋಡ್ ಶೋ ಮಾಡಬೇಕಿತ್ತು. ಸದ್ಯ ಕಿಚ್ಚ ರೋಡ್ ಶೋ ಮೊಟಕು ಗೊಳಿಸಿದಕ್ಕೆ ಬಿಜೆಪಿಗೆ ಟೆನ್ಸನ್ ಶುರುವಾಗಿದೆ. ಪ್ರಚಾರದ ಜವಬ್ದಾರಿ ವಹಿಸಿದ್ದ ಸಚಿವರ ಮೇಲೆ ಕಿಚ್ಚ ಅಸಮಧಾನ ತೋರಿದ್ದಾರೆ ಎನ್ನಲಾಗುತ್ತಿದೆ. ರೋಡ್ ಶೋ ವೇಳೆ ಸರಿಯಾದ ವ್ಯವಸ್ಥೆ ಮಾಡದ ಕಾರಣ ಪ್ರಚಾರ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
ಸರಿಯಾದ ಸೆಕ್ಯೂರಿಟಿ ವ್ಯವಸ್ಥೆ. ಪ್ರಚಾರದ ಗಾಡಿಯಲ್ಲಿ ಜನರ ಗುಂಪು. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಬೇಕಾದ ವ್ಯವಸ್ಥೆ ಇಲ್ಲದ ಕಾರಣ ಕಿಚ್ಚ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮಾಹಿತಿಗಳ ಪ್ರಕಾರ ಕಿಚ್ಚನ ಪ್ರಚಾರದ ಹೊಣೆ ಸಚಿವ ಸುಧಾಕರ್ಗೆ ಸಿಎಂ ವಹಿಸಿದ್ದರು. ಅದರೆ ಪ್ರಚಾರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡದ ಕಾರಣ ಸುಧಾಕರ್ ಮೇಲೆ ಬೇಸರ ವ್ಯಕ್ಯಪಡಿಸಿ ಪ್ರಚಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.