ಒಂದು ಕಡೆ ಭೀಕರ ಬರ ಇನ್ನೊಂದು ಕಡೆ ಬಾರದ ಮಳೆ ಹೀಗಾಗಿ ಸಾಲ ಪಡೆದಿದ್ದ ರೈತ ಹಣ ಮರಳಿಸದ ಹಿನ್ನೆಲೆಯಲ್ಲಿ ಸಾಲ ಮರುಪಾತಿಗೆ ಸಾಲ ಕೊಟ್ಟಿದ್ದ ಮಹಿಳೆಯ ಕಿರುಕುಳದಿಂದ ಮನನೊಂದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಯಮಕನಮರಡಿ ಮತಕ್ಷೇತ್ರದ ಇಸ್ಲಾಂಪೂರ ಗ್ರಾಮದಲ್ಲಿ ನಡೆದಿದೆ.
ಮೃತ ರೈತ ರಾಜು ಖೋತಗಿ ಸಿದ್ದವ್ಬ ಬಯ್ಯನ್ನವರ ಎಂಬ ಮಹಿಳೆಯಿಂದ ಒಂದುವರೆ ಲಕ್ಷ ಸಾಲ ಪಡೆದಿದ್ದು ಬಡ್ಡಿ ಆಡುತ್ತಿದ್ದ ಮಹಿಳೆ ಏಕಾ ಏಕಿ ರಾಜು ಖೋತಗಿ ಅವರ ಪತ್ನಿ ದುರ್ಗವ್ವ ಮತ್ತು ಪುತ್ರ ಬಸವರಾಜ ಅವರನ್ನು ತನ್ನ ಮನೆಯಲ್ಲಿ ಇರಿಸಿಕೊಂಡ ಕಾರಣ ಮನನೊಂದ ರೈ
ಸಾಲ ತೀರಿಸಲು ಎರಡು ದಿನಗಳ ಗಡುವು ನೀಡಿದ್ದ ಮಹಿಳೆ ಸಿದ್ದವ್ವ ಬಯ್ಯನ್ನವರ ಕಿರುಕುಳದಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು ವಿಷಯ ತಿಳಿದ ಯಮಕನಮರಡಿ ಪೋಲಿಸರು ಮೃತ ರಾಜು ಖೋತಗಿ ಪತ್ನಿ ದುರ್ಗವ್ವ ಮತ್ತು ಪುತ್ರ ಬಸವರಾಜ ಅವರನ್ನು ಗೃಹಬಂಧನದಿಂದ ಮುಕ್ತ ಗೊಳಿಸಿದ್ದು ಸಾಲ ನೀಡಿದ್ದ ಮಹಿಳೆ ಸಿದ್ದವ್ವ ಬಯ್ಯನ್ನವರ ಮೇಲೆ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.