ಆನೇಕಲ್:- ಕಿಲ್ಲರ್ ಟ್ಯಾಂಕರ್ ಗೆ ವ್ಯಕ್ತಿ ಬಲಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಬೆಟ್ಟದಾಸನಪುರದ ಬಳಿ ಜರುಗಿದೆ.
ಬೆಟ್ಟದಾಸನಪುರ ವಾಸಿ ಶಿವಕುಮಾರ್(36) ಮೃತ ದುರ್ದೈವಿ. ರಸ್ತೆ ಬದಿಯಲ್ಲಿದ್ದವನ ಮೇಲೆ ಟ್ಯಾಂಕರ್ ವಾಹನ ಹರಿದಿದೆ. ಹೊಟ್ಟೆ ಮತ್ತು ಎದೆ ಮೇಲೆ ಚಕ್ರ ಹರಿದು ಸ್ಥಳದಲ್ಲಿಯೇ ಶಿವಕುಮಾರ್ ಮೃತಪಟ್ಟಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಮೃತ ಶಿವಕುಮಾರ್ ತೆರಳಿದ್ದರು. ಪತ್ನಿಗೆ ಪೋನ್ ಮಾಡಿ ಅಪಘಾತದ ಬಗ್ಗೆ ಸ್ಥಳೀಯರು ತಿಳಿಸಿದ್ದರು. ಮನೆಗೆ ಅಧಾರವಾಗಿದ್ದವನ ಬಲಿ ಟ್ಯಾಂಕರ್ ಪಡೆದಿದ್ದ. ನ್ಯಾಯ ಕೊಡಿಸುವಂತೆ ಮೃತನ ಪತ್ನಿ ಆಗ್ರಹಿಸಿದರು.
ಸ್ಥಳಕ್ಕೆ ಬನ್ನೇರುಘಟ್ಟ ಪೋಲಿಸರು ಭೇಟಿ ಪರಿಶೀಲನೆ ಮಾಡಿದ್ದಾರೆ.
