ಪಂಜಾಬ್ ಕಿಂಗ್ಸ್ ತಂಡ ಮಾಲೀಕರಿಗೆ ವಿರಾಟ್ ಕೊಹ್ಲಿ ಕ್ಷಮೆಯಾಚಿಸಿದ್ದಾರೆ. ಐಪಿಎಲ್ ಟೂರ್ನಿ ಬಹುತೇಕ ಕೊನೆಯ ಹಂತದಲ್ಲಿದ್ದಾಗ ಆರ್ಸಿಬಿ ಪುಟಿದ್ದೇದಿದೆ, ಸತತ ನಾಲ್ಕು ಪಂದ್ಯಗಳನ್ನು ಗೆಲ್ಲುವುದು ಭರ್ಜರಿ ಗೆಲುವು ಪಡೆದಿದೆ. ಸದ್ಯ ಆರ್ಸಿಬಿ 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಆರ್ಸಿಬಿ ಟೂರ್ನಿಯಲ್ಲಿ ಇನ್ನು 2 ಪಂದ್ಯಗಳನ್ನು ಆಡಬೇಕಿದ್ದು, ಬೃಹತ್ ನೆಟ್ ರನ್ ರೇಟ್ನೊಂದಿಗೆ ಎರಡೂ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾದರೆ, ಒಟ್ಟು 14 ಪಾಯಿಂಟ್ಗಳೊಂದಿಗೆ ಪ್ಲೇಆಫ್ನ ಪ್ರವೇಶಿಸುವ ಅವಕಾಶವಿದೆ. ಇನ್ನು, ಆರ್ಸಿಬಿ ವಿರುದ್ಧ ಸೋಲಿನೊಂದಿಗೆ ಪಂಜಾಬ್ ತಂಡ ಪ್ಲೇ ಆಫ್ ರೇಸ್ನಿಂದ ಹೊರ ಬಿದ್ದಿದೆ. ಇದುವರೆಗೂ 12 ಪಂದ್ಯಗಳನ್ನು ಆಡಿರುವ ಪಂಜಾಬ್ ಕಿಂಗ್ಸ್, 8 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ. ಇನ್ನು 2 ಪಂದ್ಯ ಆಡಬೇಕಿದ್ದು, ಅವುಗಳಲ್ಲಿ ಗೆದ್ದರೂ ಯಾವುದೇ ಬದಲಾವಣೆ ಆಗೋದಿಲ್ಲ. ಇದರೊಂದಿಗೆ ಕ್ಯಾಪ್ಟನ್ ಸ್ಯಾಮ್ ಕರನ್ ಸೋಲನ್ನು ಒಪ್ಪಿಕೊಂಡಿದ್ದಾರೆ
ಉಳಿದಂತೆ ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿರಾಟ್ ಕೊಹ್ಲಿ ಅವರು ಪಂದ್ಯದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ಪಂಜಾಬ್ ಕಿಂಗ್ಸ್ ತಂಡ ಮಾಲೀಕರಾದ ಪ್ರೀತಿ ಜಿಂಟಾ ಅವರು ಪ್ರಶಸ್ತಿಯನ್ನು ನೀಡಿದ್ದರು. ಈ ವೇಳೆ ವಿರಾಟ್ ಕೊಹ್ಲಿ, ಪ್ರೀತಿ ಜಿಂಟಾ ಅವರ ಬಳೆ ಕ್ಷಮೆ ಕೋರಿದ್ದರು. ಇದಕ್ಕೆ ನಗು ಮೊಗದಿಂದಲೇ ಪ್ರೀತಿ ಜಿಂಟಾ ಪ್ರತಿಕ್ರಿಯೆ ನೀಡಿ ಕೊಹ್ಲಿ ಅವರ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದ್ದರು.
ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಎರಡಲ್ಲೂ ಮಿಂಚಿದ್ದ ವಿರಾಟ್ ಕೊಹ್ಲಿ, 47 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿಗಳೊಂದಿಗೆ 92 ರನ್ ಗಳಿಸಿ ಔಟಾಗಿದ್ದರುರು. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಮತ್ತು ಕ್ಯಾಮರೂನ್ ಗ್ರೀನ್ ಬಿಗ್ ಹಿಟ್ಗಳ ಮೂಲಕ ತಂಡ ಮೊತ್ತ 240 ದಾಟುವಂತೆ ನೋಡಿಕೊಂಡಿದ್ದರು.