ಐಸಿಸಿ ಏಕದಿನ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಬಲಿಷ್ಠ ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡಗಳು ಮುಖಾಮುಖಿ ಆಗಿತ್ತು.
ಶತಕೋಟಿ ಭಾರತೀಯರಿಗೆ ಈ ದಿನ ಎಂದೆಂದಿಗು ಮರೆಯಲು ಆಗಲ್ಲ. ಯಾಕಂದ್ರೆ ಒಂದು ಕಡೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ನಿರ್ಮಾಣ ಮಾಡಿದ್ದ ದಾಖಲೆ ಇಂದು ಮುರಿದು ಹೋಗಿದೆ. ಇನ್ನೊಂದೆಡೆ ತೆಂಡೂಲ್ಕರ್ ನಿರ್ಮಿಸಿದ್ದ ದಾಖಲೆ ಭಾರತೀಯನೇ ಮುರಿದಿದ್ದಾನೆ. ಹೀಗೆ ಎಷ್ಟೋ ಜನರ ಡೈರಿಯಲ್ಲಿ 15 ನವೆಂಬರ್ 2023 ಅಚ್ಚಳಿಯದೆ ಉಳಿಯಲಿದೆ. ಇದಕ್ಕೆಲ್ಲಾ ಕಾರಣ ಮಾನ್ಯ ಕೊಹ್ಲಿ.
ವಿರಾಟ್ ಕೊಹ್ಲಿ ಅಂದ್ರೆ ಮಾಸ್, ವಿರಾಟ್ ಕೊಹ್ಲಿ ಅಂದ್ರೆ ಕ್ಲಾಸ್.. ಹೀಗೆ ಎಲ್ಲದಕ್ಕೂ ಈ ನಮ್ಮ ಕೊಹ್ಲಿಯವರೆ ಮಾದರಿ. ಇಂತಿಪ್ಪ ಕೊಹ್ಲಿ ಮೊನ್ನೆ ಮೊನ್ನೆ ತಾನೆ ಏಕದಿನ ಕ್ರಿಕೆಟ್ ಅಖಾಡದಲ್ಲಿ ತಮ್ಮ 48ನೇ ಶತಕ ಬಾರಿಸಿದ್ದರು. ಆಗಲೇ ಎಲ್ಲರಿಗೂ ಗೊತ್ತಾಗಿದ್ದು, ಸಚಿನ್ ಅವರ ದಾಖಲೆಯನ್ನ ಕೊಹ್ಲಿ ಇದೇ ವಿಶ್ವಕಪ್ ಅಖಾಡದಲ್ಲಿ ಮುರಿಯುತ್ತಾರೆ ಅಂತಾ. ಈ ನಂಬಿಕೆಯನ್ನು ವಿರಾಟ್ ಕೊಹ್ಲಿ ಸುಳ್ಳು ಮಾಡಲಿಲ್ಲ. ಅದರಲ್ಲೂ 05 ನವೆಂಬರ್ 2023ರ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ತಮ್ಮ 49ನೇ ಶತಕ ಬಾರಿಸಿದ್ದರು. ಈ ಮೂಲಕ ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದ ದಾಖಲೆಗೂ ಸಮವಾಗಿ ನಿಂತರು. ಇದೀಗ ನೋಡಿದರೆ ಕ್ರಿಕೆಟ್ ದೇವರು ಸಚಿನ್ ದಾಖಲೆಯನ್ನೇ ಸರಿಗಟ್ಟಿದ್ದಾರೆ ಕೊಹ್ಲಿ.
ಅಂದಹಾಗೆ ಇದೀಗ ತಮ್ಮ 50ನೇ ಸೆಂಚ್ಯುರಿ ಬಾರಿಸಿರುವ ವಿರಾಟ್ ಕೊಹ್ಲಿ 24 ಡಿಸೆಂಬರ್ 2009 ರಂದು ತಮ್ಮ ಮೊದಲ ಶತಕ ಬಾರಿಸಿದ್ದರು. ಶ್ರೀಲಂಕಾ ವಿರುದ್ಧ ಕೊಲ್ಕತ್ತಾ ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ ತಮ್ಮ ಮೊದಲನೇ ಸೆಂಚ್ಯುರಿ ದಾಖಲಿಸಿದ್ದರು. ಕಳೆದ 14 ವರ್ಷಗಳ ಅಂತರದಲ್ಲಿ ಮಿಕ್ಕ 49 ಶತಕಗಳನ್ನು ಬಾರಿಸಿದ್ದಾರೆ ವಿರಾಟ್ ಕೊಹ್ಲಿ. ಇಂದಿನ ಪಂದ್ಯದಲ್ಲೂ ವಿರಾಟ್ ಶತಕ ಬಾರಿಸಿ, ಇತಿಹಾಸ ನಿರ್ಮಿಸುತ್ತಾರೆ ಎನ್ನುವ ಅಭಿಮಾನಿಗಳ ಕನಸು ಈ ಮೂಲಕ ನನಸಾಗಿದೆ. ಇದರ ಜತೆ ಟೀಂ ಇಂಡಿಯಾ 2023ರ ವಿಶ್ವಕಪ್ ಟ್ರೊಫಿ ಗೆಲ್ಲಲು ಮತ್ತಷ್ಟು ಹತ್ತಿರವಾಗುತ್ತಿದೆ
ಕ್ರಿಕೆಟ್ ಜಗತ್ತಿನ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್ರ ತವರು ಮಹಾರಾಷ್ಟ್ರದ ಮುಂಬೈ ನಗರಿಯಲ್ಲೇ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ 49ನೇ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ದಾಖಲೆಗೆ ಸಮವಾಗಿ ನಿಂತಿದ್ದರು. ಇದೀಗ, ಏಕದಿನ ಕ್ರಿಕೆಟ್ ಮಾದರಿಯಲ್ಲಿ 50ನೇ ಸೆಂಚ್ಯುರಿ ಬಾರಿಸಿ ಕ್ರಿಕೆಟ್ ಚರಿತ್ರೆಯಲ್ಲಿ ಯಾರೂ ಮಾಡಲು ಆಗದ ದಾಖಲೆ ನಿರ್ಮಿಸಿದ್ದಾರೆ