ಕಿರಿಕ್ ಬ್ಯೂಟಿ ನಟಿ ರಶ್ಮಿಕಾ ಮಂದಣ್ಣ ಮುಟ್ಟಿದೆಲ್ಲಾ ಚಿನ್ನವಾಗ್ತಿದೆ. ಕೈ ಹಿಡಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗ್ತಿದ್ದು ನಿರ್ದೇಶಕರು ಆಕೆಯ ಮನೆ ಬಾಗಿಲಿಗೆ ಅಲೆಡಾಡ್ತಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟನೆಯ ಛಾವಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ರಶ್ಮಿಕಾ ಮಂದಣ್ಣ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಆಕೆ ಎಷ್ಟೇ ಟ್ರೋಲ್ ಆಗಲಿ. ಏನೇ ಆಗಲಿ ರಶ್ಮಿಕಾ ಅವರ ಕ್ರೇಜ್ ಮಾತ್ರ ಕಡಿಮೆ ಆಗೋದೆ ಇಲ್ಲ. ಒಂದಲ್ಲ ಒಂದು ಕಾರಣಕ್ಕೆ ಟ್ರೋಲಿಗರ ಬಾಯಿಗೆ ಆಹಾರವಾಗುವ ನಟಿಯ ಸಿನಿಮಾಗಳ ವೀಕ್ಷಕರ ಸಂಖ್ಯೆ ಕಡಿಮೆಯಾಗಲ್ಲ ಎನ್ನುವುದಕ್ಕೆ ಸದ್ಯ ರಿಲೀಸ್ ಆಗಿರುವ ಛಾವಾ ಸಿನಿಮಾವೇ ಸಾಕ್ಷಿ.
ಛಾವಾ ಸಿನಿಮಾ ಬರೀ ಒಂದು ವಾರದಲ್ಲಿ 300 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಭರ್ಜರಿ ಕಲೆಕ್ಷನ್ ಮಾಡಿದ ಈ ಸಿನಿಮಾ ರಶ್ಮಿಕಾ ಲಕ್ಕಿ ಚಾರ್ಮ್ ಅನ್ನೋದನ್ನು ಸಾಬೀತು ಪಡಿಸಿದೆ.
ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಾಲಿವುಡ್ ಚಿತ್ರ ‘ಛಾವಾ’ ಗುರುವಾರ ಶೇ. 31.25 ರಷ್ಟು ಕಲೆಕ್ಷನ್ ಕುಸಿತ ಕಂಡಿದೆ. ಲಕ್ಷ್ಮಣ್ ಉಟೇಕರ್ ಅವರ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಸಿನಿಮಾ ನೋಡೋಕೆ ಜನರು ಬರುತ್ತಲೇ ಇದ್ದಾರೆ.
ಮ್ಯಾಡಾಕ್ ಫಿಲ್ಮ್ಸ್ ನಿರ್ಮಿಸಿದ ಛಾವಾ ಚಿತ್ರವು 7ನೇ ದಿನದಂದು ಭಾರತದಲ್ಲಿ ₹ 22 ಕೋಟಿ ನಿವ್ವಳ ಗಳಿಸಿದೆ ಎಂದು ಚಲನಚಿತ್ರೋದ್ಯಮ ಟ್ರ್ಯಾಕರ್ ಸ್ಯಾಕ್ನಿಲ್ಕ್ ಹೇಳಿದ್ದಾರೆ. ಈ ಅಂಕಿಅಂಶಗಳು ಮೊದಲ ವಾರದ ಬಾಕ್ಸ್ ಆಫೀಸ್ ಗಳಿಕೆಗೆ ಸಮನಾಗಿದೆ.
ಒಟ್ಟು ₹ 219.75 ಕೋಟಿ ನಿವ್ವಳ ಗಳಿಸಿದೆ. ಫೆಬ್ರವರಿ 20 ರಂದು ಹಿಂದಿ ಭಾಷೆಯಲ್ಲಿ ಇದು ಒಟ್ಟಾರೆಯಾಗಿ ಶೇ. 27.96 ರಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿದೆ. ವಿಕ್ಕಿ ಕೌಶಲ್ ಅಭಿನಯದ ಈ ಚಿತ್ರವು ಬಿಡುಗಡೆಯಾದ ಮೊದಲ ದಿನದಂದು ದೇಶೀಯ ಮಾರುಕಟ್ಟೆಯಲ್ಲಿ ₹ 31 ಕೋಟಿ ಕಲೆಕ್ಷನ್ ಮಾಡಿದೆ.
: ‘ಛಾವಾ’ ಚಿತ್ರದ ಜಾಗತಿಕ ಬಾಕ್ಸ್ ಆಫೀಸ್ ಗಳಿಕೆಯನ್ನು ಪರಿಗಣಿಸಿ, ಚಿತ್ರವು ಆರು ದಿನಗಳಲ್ಲಿ ₹ 270 ಕೋಟಿ ಗಳಿಸಿದೆ ಎಂದು ಸಕ್ನಿಲ್ಕ್ ಬಹಿರಂಗಪಡಿಸಿದೆ. ವಿದೇಶಿ ಗಳಿಕೆ ₹ 33 ಕೋಟಿ ಒಟ್ಟು ಮತ್ತು ಭಾರತದ ಒಟ್ಟು ಕಲೆಕ್ಷನ್ ₹ 236.85 ಕೋಟಿಯಾಗಿದೆ.
ಫೆಬ್ರವರಿ 19 ರಂದು ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಒಂದು ದೊಡ್ಡ ಘೋಷಣೆ ಮಾಡಿದರು. ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಆಧರಿಸಿದ ವಿಕ್ಕಿ ಕೌಶಲ್ ಅವರ ಐತಿಹಾಸಿಕ ನಾಟಕ ಚಲನಚಿತ್ರ ‘ಛಾವಾ’ ಆಯಾ ರಾಜ್ಯಗಳಲ್ಲಿ ತೆರಿಗೆ ಮುಕ್ತವಾಗಿರುವುದನ್ನು ಘೋಷಿಸಿದರು.
