ಕೋಟಿ ಕೋಟಿ ಹಣ ಇದ್ದವರಲ್ಲಿ ದಾನ ಮಾಡುವವರ ಸಂಖ್ಯೆ ಸಾಕಷ್ಟು ವಿರಳ. ಆದರೆ ಇಲ್ಲೊಬ್ಬ ಹೃದಯವಂತ ಆಟಗಾರ ನಿಜಕ್ಕೂ ಕಷ್ಟದ ಬದುಕಿನ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದಾನೆ. ಹುಬ್ಬಳ್ಳಿಯ ಯುವಕರ ಸಹಾಯದಿಂದ ಮಹತ್ವದ ಕಾರ್ಯ ಸಾಧನೆಯಾಗಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ.. ಕೆ.ಎಲ್. ರಾಹುಲ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತ ತಂಡದ ಖ್ಯಾತ ಕ್ರಿಕೆಟ್ ಆಟಗಾರ. ಸಾಕಷ್ಟು ಜನ ಅಭಿಮಾನಿಗಳನ್ನು ಹೊಂದಿರುವ ಕೆ.ಎಲ್.ರಾಹುಲ್ ವಿದ್ಯಾರ್ಥಿಯೊಬ್ಬನಿಗೆ ಆರ್ಥಿಕ ನೆರವು ನೀಡುವ ಮೂಲಕ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ.
ಹೌದು..ಅಮೃತ ಮಾವಿನಕಟ್ಟಿ ಎಂಬುವಂತ ಮಹಲಿಂಗಪುರದ ಸಾಮಾನ್ಯ ಯುವಕ ಮೊನ್ನೆಯಷ್ಟೇ ಪಿಯುಸಿ ಕಾಮರ್ಸನಲ್ಲಿ 600ಕ್ಕೆ 571 ಅಂಕಗಳನ್ನು ಪಡೆದಿದ್ದಾನೆ. ಆದರೆ ಕಡುಬಡತನದಲ್ಲಿರುವ ಈ ಯುವಕ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ತಾಯಿ ತೀರಿ ಹೋಗಿದ್ದಾರೆ. ಆದರೆ ಓದಲೇ ಬೇಕು ಎಂಬುವಂತ ಛಲ ಯುವಕನಿಗೆ ನೀತಿನ ಹಾಗೂ ಹುಬ್ಬಳ್ಳಿಯ ಅವರನ್ನು ಭೇಟಿ ಮಾಡಿಸಿದೆ. ಅದೃಷ್ಟವಶಾತ್ ಮಂಜುನಾಥ ಅವರು ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಅವರೊಂದಿಗೆ ಮಾತನಾಡಿ ಯುವಕನ ಶಿಕ್ಷಣಕ್ಕೆ ಆರ್ಥಿಕ ನೆರವು ಕೊಡಿಸಿದ್ದಾರೆ.
ಇನ್ನೂ ಯುವಕ ಬಿಕಾಂ ಓದಲು ಕೆಎಲ್ಇ ಸಂಸ್ಥೆಯ ಬಿವ್ಹಿಬಿ ಕಾಲೇಜಿಗೆ ಬಂದಿದ್ದಾನೆ. ಆತನ ಪರಿಸ್ಥಿತಿ ಹಾಗೂ ಆತನ ಅಂಕಗಳನ್ನು ನೋಡಿದ ಆಡಳಿತ ಮಂಡಳಿ 10 ಸಾವಿರ ರಿಯಾಯಿತಿ ನೀಡಿದೆ. ಆದರೆ ಉಳಿದ ಹಣವನ್ನು ತುಂಬಲು ಸಾಧ್ಯವಾಗದೇ ಇದ್ದಾಗ ಕೆ.ಎಲ್.ರಾಹುಲ್ 75 ಸಾವಿರ ಹಣವನ್ನು ಯುವಕನ ಖಾತೆಗೆ ಜಮಾ ಮಾಡಿದ್ದು, ಯುವಕನ ಭವಿಷ್ಯಕ್ಕೆ ಬೆಳಕಾಗಿದ್ದಾರೆ.
ಒಟ್ಟಿನಲ್ಲಿ ಯುವಕನ ನೆರವಿಗೆ ಹುಬ್ಬಳ್ಳಿಯ ಮಂಜು ಸಾಕಷ್ಟು ಶ್ರಮವಹಿಸಿದ್ದು, ಕೆ.ಎಲ್.ಹುಲ್ ಮೂಲಕ ಯುವಕನ ಬದುಕಿಗೆ ಹೊಸ ಅರ್ಥ ಕಲ್ಪಿಸಿದ್ದಾರೆ. ಅದೆಷ್ಟೋ ಪ್ರತಿಭೆಗಳು ಸೂಕ್ತ ವೇದಿಕೆ, ಪ್ರೋತ್ಸಾಹ ಸಿಗದೇ ಪರದಾಡುತ್ತಿವೆ. ಈ ಬಗ್ಗೆ ಉಳ್ಳವರು ಬಡ ಪ್ರತಿಭೆಗಳ ಬಗ್ಗೆ ಕಾಳಜಿ ವಹಿಸಬೇಕು ಎಂಬುವುದು ನಮ್ಮ ಆಶಯ ಕೂಡಾ.