ಬೆಂಗಳೂರು: ನನ್ನ ಪ್ರಕಾರ ಇನ್ನೂ ಬೆಲೆ ಏರಿಕೆ ಜಾಸ್ತಿ ಮಾಡಬೇಕಿತ್ತು. ಯಾರು ಬೇಕಾದ್ರು ವಿವಾದ ಮಾಡಲಿ, ಯಾರು ಬೇಕಾದ್ರು ಬೈಯಲಿ. ವಿರೋಧ ಮಾಡೋರು ಮಾಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹಾಲಿನ ದರ ಏರಿಕೆಯನ್ನು ಮತ್ತೆ ಸಮರ್ಥನೆ ಮಾಡಿಕೊಂಡರು.
ಇದೇ ವೇಳೆ ಹಾಲಿನ ದರ ಏರಿಕೆಗೆ ಬಿಜೆಪಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿರೋಧ ವ್ಯಕ್ತಪಡಿಸುವು ದರಿಂದಲೇ ಬಿಜೆಪಿಯವರು ರೈತರ ವಿರೋಧಿಗಳು ಎಂಬುದು ಅರ್ಥ ಆಗುತ್ತದೆ. 2 ರೂ. ಜಾಸ್ತಿ ಅಗಿರೋದು ರೈತರಿಗೆ ತಲುಪುತ್ತದೆ. ರೈತರು ಎಷ್ಟು ಕಷ್ಟ, ಎಷ್ಟು ಸಂಕಷ್ಟದಲ್ಲಿ ಇದ್ದಾರೆ ಅಂತ ಬಿಜೆಪಿ ಅವರಿಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.