ಪಪ್ಪಾಯಿ ಹಣ್ಣಿನಲ್ಲಿ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಇವೆ. ಪರಂಗಿ ಹಣ್ಣಿನಲ್ಲಿ ಕ್ಯಾಲೋರಿಗಳು ಕಡಿಮೆ ಇರುತ್ತವೆ ಮತ್ತು ಪೋಷಕಾಂಶಗಳು ಅಧಿಕವಾಗಿರುತ್ತವೆ. ಡಯಟ್ ಮಾಡುವವರಿಗೆ ಇದು ಹೇಳಿ ಮಾಡಿಸಿದಂತಹ ಆಹಾರವಾಗಿದೆ.
ಪಪ್ಪಾಯಿ ಎಂಬುದು ಕೇವಲ ಹಣ್ಣಲ್ಲ, ಅನೇಕ ರೋಗಗಳಿಗೆ ಮನೆಮದ್ದು ಎಂಬುದು ಗೊತ್ತಿರಲಿ. ಇದನ್ನು ತಿನ್ನುವುದರಿಂದ ಸಿಗುವ ಪ್ರಯೋಜನಗಳು ಸಾಕಷ್ಟಿವೆ.
* ಪಪ್ಪಾಯಿ ಹಣ್ಣನ್ನು ದಿನಂಪ್ರತಿ ತಿನ್ನುವುದರಿಂದ ಚರ್ಮದ ಸಮಸ್ಯೆಗೆ ಪರಿಹಾರ ಕಾಣಬಹುದು. ಚರ್ಮ ಸುಕ್ಕುಗಟ್ಟುವುದನ್ನು ತಡೆದು, ಚಿರ ಯೌವನವನ್ನು ಕಾಪಾಡಿಕೊಳ್ಳಲು ಪರಂಗಿ ಹಣ್ಣು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಮುಖಕ್ಕೆ ಪಪ್ಪಾಯ ಪ್ಯಾಕ್ ಮಾಡುವ ಮೂಲಕ ಕಂದು ಬಣ್ಣದ ತ್ವಚೆಯಿಂದ ಮುಕ್ತಿ ಹೊಂದಬಹುದು.
* ಈ ಹಣ್ಣನ್ನು ತಿನ್ನುವುದರಿಂದ ಕೂದಲು ಉದುರುವುದನ್ನು ಸಹ ತಡೆಗಟ್ಟಬಹುದು. ಗರ್ಭಾವಸ್ಥೆಯ ಬಳಿಕ ಕಾಡುವ ಸಮಸ್ಯೆಗಳಿಗೆ ಈ ಹಣ್ಣು ರಾಮ ಬಾಣ.
* ಹೊಟ್ಟೆಯ ಸಮಸ್ಯೆಗಳಿಗೆ ಪಪ್ಪಾಯ ಹೇಳಿ ಮಾಡಿಸಿದ ಮದ್ದು. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಮಲಬದ್ದತೆ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
* ಇತ್ತೀಚಿನ ಜೀವನಶೈಲಿಯಿಂದ ಪ್ರತಿಯೊಬ್ಬರಲ್ಲೂ ರಕ್ತದೊತ್ತಡದ ಸಮಸ್ಯೆ ಕಾಣಬಹುದು. ಇದಕ್ಕೆ ಪರಿಹಾರವಾಗಿ ದಿನವೂ ಈ ಹಣ್ಣನ್ನು ತಿನ್ನಬಹುದು. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಪರಿಣಾಮಕಾರಿಯಾಗಿದೆ.
* ಸಣ್ಣಪುಟ್ಟ ಸುಟ್ಟ ಗಾಯಗಳಿಗೂ ಪಪ್ಪಾಯ ಹಣ್ಣಿನ ಪೇಸ್ಟ್ ಅನ್ನು ಮನೆಮದ್ದಾಗಿ ಬಳಸಬಹುದು. ಆದರೆ ಇದರಿಂದ ಉರಿಯೂತ ಹೆಚ್ಚಾದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.