ಆಯುರ್ವೇದ ಚಿಕಿತ್ಸೆಯಲ್ಲಿ ಕರಿಬೇವು ಮಹತ್ವ ಪಡೆದಿದೆ. ಹಾಗಾಗಿ ಇದನ್ನೂ ದಿನವೂ ಬಳಕೆ ಮಾಡುವುದು ಆರೋಗ್ಯಕ್ಕೆ ಒಳ್ಳೆದು ಎಂದು ತಜ್ಞರು ಹೇಳುತ್ತಾರೆ
ಮಾರುಕಟ್ಟೆಯಿಂದ ತಂದಾಗಾ ತಾಜಾ ಆಗಿರುವ ಕರಿಬೇವಿನ ಸೊಪ್ಪು ಒಂದು ದಿನ ಕಳೆಯುತ್ತಿದ್ದಂತೆ ಕೊಂಚ ಕಳೆಗುಂದಿ ಎಲೆಗಳು ಒಣಗಲಾರಂಭಿಸುತ್ತವೆ.
ಇದನ್ನು ತಡೆಯಲು ಏನು ಮಾಡಬೇಕೆಂದು ಅನೇಕರು ಯೋಚಿಸುತ್ತಾರೆ. ಅಂತಹವರಿಗಾಗಿ ಕೆಲವು ಸುಲಭ ಸಲಹೆಗಳನ್ನು ಕಂಡುಕೊಂಡಿದ್ದೇವೆ. ಅವುಗಳನ್ನು ಅನುಸರಿಸಿದರೆ ಮಾರುಕಟ್ಟೆಯಿಂದ ಸಿಗುವ ಕರಿಬೇವಿನ ಸೊಪ್ಪು ಬಹು ದಿನಗಳವರೆಗೆ ಬಾಡದೇ ತಾಜಾತನದಿಂದ ಕೂಡಿರುತ್ತದೆ ಎನ್ನುತ್ತಾರೆ ತಜ್ಞರು. ಆ ಸಲಹೆಗಳು ಯಾವವು ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿಯಿರಿ.
ತಂದ ಕರಿಬೇವಿನ ಸೊಪ್ಪನ್ನು ತೊಳೆದು ಜರಡಿಯಲ್ಲಿ ಹಾಕಿ ಫ್ಯಾನ್ ಅಡಿಯಲ್ಲಿ ಒಣಗಿಸಬೇಕು. ಹೀಗೆ ಮಾಡುವುದರಿಂದ ಎಲೆಗಳ ಮೇಲಿನ ನೀರು ಜಾರುತ್ತದೆ. ನಂತರ ಒಣ ಬಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ ಎಲೆಗಳನ್ನು ಇರಿಸಿ. ಇದನ್ನು ಮಾಡುವುದರಿಂದ, ಎಲೆಗಳಲ್ಲಿ ಉಳಿದಿರುವ ತೇವಾಂಶವು ಹೀರಿಕೊಳ್ಳುತ್ತದೆ ಕೊಳೆಯುವುದು ಕಡಿಮೆಯಾಗುತ್ತದೆ.
ಗಾಳಿಯಾಡದ ಪಾತ್ರೆಯನ್ನು ತೆಗೆದುಕೊಂಡು ಅದರೊಳಗೆ ಟಿಶ್ಯೂ ಪೇಪರ ಹಾಕಿ, ನಂತರ ಅದರ ಮೇಲೆ ಕರಿಬೇವು ಎಲೆಗಳನ್ನು ಹಾಕಿ ಫ್ರಿಡ್ಜ್ನಲ್ಲಿ ಸಂಗ್ರಹಿಸಿ. ಹೀಗೆ ಮಾಡುವುದರಿಂದ ಕರಿಬೇವಿನ ಎಲೆಗಳು ಒಣಗಿ ಕೊಳೆಯವುದಿಲ್ಲ, ಹೆಚ್ಚು ಕಾಲ ತಾಜಾತನದಿಂದ ಇರುತ್ತವೆ ಎನ್ನುತ್ತಾರೆ ತಜ್ಞರು.
ಗಾಳಿಯಾಡದ ಪಾತ್ರೆಯನ್ನು ತೆಗೆದುಕೊಂಡು ಅದರೊಳಗೆ ಟಿಶ್ಯೂ ಪೇಪರ ಹಾಕಿ, ನಂತರ ಅದರ ಮೇಲೆ ಕರಿಬೇವು ಎಲೆಗಳನ್ನು ಹಾಕಿ ಫ್ರಿಡ್ಜ್ನಲ್ಲಿ ಸಂಗ್ರಹಿಸಿ. ಹೀಗೆ ಮಾಡುವುದರಿಂದ ಕರಿಬೇವಿನ ಎಲೆಗಳು ಒಣಗಿ ಕೊಳೆಯುವುದಿಲ್ಲ, ಹೆಚ್ಚು ಕಾಲ ತಾಜಾತನದಿಂದ ಇರುತ್ತವೆ ಎನ್ನುತ್ತಾರೆ ತಜ್ಞರು.
ಹೀಗೆ ಮಾಡುವುದರಿಂದಲೂ ಬಹುದಿನಗಳವರೆಗೆ ಕರಿಬೇವು ಫ್ರೆಶ್ ಆಗಿರುತ್ತದೆ. ಇದಕ್ಕಾಗಿ ನೀವು ಕರಿಬೇವಿನ ಎಲೆಗಳನ್ನು ಕಾಂಡದಿಂದ ಬೇರ್ಪಡಿಸಿ ಗಾಜಿನ ಪಾತ್ರೆಯಲ್ಲಿ ಹಾಕಿ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿಡಿ. ಅಗತ್ಯವಿದ್ದಾಗ, ಕೆಲವು ಎಲೆಗಳನ್ನು ತೆಗೆದುಕೊಂಡು ಅವುಗಳನ್ನು