ಇತ್ತೀಚೆಗೆ ನಟ-ನಟಿಯರು ತಮ್ಮ ದೇಹದ ತೂಕವನ್ನು ಕಳೆದುಕೊಳ್ಳಲು ಕಿಟೋ ಡಯಟ್ ಮಾಡಲು ಬಯಸುತ್ತಾರೆ. ಅನೇಕರು ಈ ಡಯಟ್ನ ಪರಿಣಾಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ಈ ಕಿಟೋ ಡಯಟ್ ಅಂದ್ರೆ ಏನು? ಈ ಡಯಟ್ನಲ್ಲಿ ಎಂತಹ ಆಹಾರಗಳಿರುತ್ತವೆ? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
ಕಿಟೋ ಡಯಟ್ನಲ್ಲಿ 4 ವಿಧಗಳಿವೆ. ಅವುಗಳೆಂದರೆ, ಸ್ಟ್ಯಾಂಡರ್ಡ್ ಕೆಟೋಜೆನಿಕ್ ಡಯಟ್, ಸೈಕ್ಲಿಕಲ್ ಕೆಟೋಜೆನಿಕ್ ಡಯಟ್, ಟಾರ್ಗೆಟೆಡ್ ಕೆಟೋಜೆನಿಕ್ ಡಯಟ್, ಹೈ ಪ್ರೋಟೀನ್ ಕೆಟೋಜೆನಿಕ್ ಡಯಟ್ ಎಂದು ಇದೆ.
ಸ್ಟ್ಯಾಂಡರ್ಡ್ ಕೆಟೋಜೆನಿಕ್ ಡಯಟ್ : ಈ ಡಯಟ್ ಫಾಲೋ ಮಾಡುವವರು ಅತ್ಯಂತ ಕಡಿಮೆ ಕಾರ್ಬ್, ಮಧ್ಯಮ ಪ್ರೋಟೀನ್ ಮತ್ತು ಹೆಚ್ಚಿನ ಕೊಬ್ಬಿನ ಆಹಾರವನ್ನು ಸೇವಿಸಬೇಕು. ಇದು ಸಾಮಾನ್ಯವಾಗಿ 70% ಕೊಬ್ಬು, 20% ಪ್ರೋಟೀನ್ ಮತ್ತು ಕೇವಲ 10% ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತದೆ
ಸೈಕ್ಲಿಕಲ್ ಕೆಟೋಜೆನಿಕ್ ಡಯಟ್: ಈ ಡಯಟ್ನಲ್ಲಿ ಹೆಚ್ಚಿನ ಕಾರ್ಬ್ ರೀಫೀಡ್ ಅವಧಿಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ 5 ಕೆಟೋಜೆನಿಕ್ ದಿನಗಳು ನಂತರ 2 ಅಧಿಕ ಕಾರ್ಬ್ ದಿನಗಳು.
ಟಾರ್ಗೆಟೆಡ್ ಕೆಟೋಜೆನಿಕ್ ಡಯಟ್ : ಈ ಡಯಟ್ ವ್ಯಾಯಾಮದ ಸುತ್ತ ಕಾರ್ಬೋಹೈಡ್ರೇಟ್ಗಳನ್ನು ಸೇರಿಸಲು ನಿಮಗೆ ಅನುಮತಿಸುತ್ತದೆ.
ಹೈ ಪ್ರೋಟೀನ್ ಕೆಟೋಜೆನಿಕ್ ಡಯಟ್ : ಇದು ಹೆಚ್ಚಿನ ಪ್ರೋಟೀನ್ ಅನ್ನು ಒಳಗೊಂಡಿದ್ದು, 60% ಕೊಬ್ಬು, 35% ಪ್ರೋಟೀನ್ ಮತ್ತು 5% ಕಾರ್ಬೋಹೈಡ್ರೇಟ್ಗಳು ಸೇರಿಸಬೇಕಾಗುತ್ತದೆ.
ಈ ಕಿಟೋ ಡಯಟ್ ಒಂದು ಚಯಾಪಚಯ ಸ್ಥಿತಿಯಾಗಿದೆ. ಈ ಡಯಟ್ ದೇಹವು ಕಾರ್ಬೋಹೈಡ್ರೇಟ್ಗಳ ಬದಲಿಗೆ ಕೊಬ್ಬನ್ನು ಇಂಧನಕ್ಕಾಗಿ ಬಳಸಲಾಗುತ್ತದೆ.
ದಿನಕ್ಕೆ ಸುಮಾರು 20 ರಿಂದ 50 ಗ್ರಾಂ ನಷ್ಟು ಕಾರ್ಬೋಹೈಡ್ರೇಟ್ ಸೇವನೆಯನ್ನು ಮಾಡಬಹುದು. ಮಾಂಸ, ಮೀನು, ಮೊಟ್ಟೆ, ಒಣಹಣ್ಣುಗಳು, ಆರೋಗ್ಯಕರವಾಗಿರುವ ಎಣ್ಣೆಗಳಲ್ಲಿರುವ ಕೊಬ್ಬುಗಳನ್ನು ಸೇವಿಸಬೇಕು.
ಅಡ್ಡಿಪಡಿಸುವ ಕೆಲವು ಆರೋಗ್ಯ ತೊಂದರೆಗಳು
ಬಾಯಾರಿಕೆ ಹೆಚ್ಚಾಗುವುದು
ಒಣ ಬಾಯಿ
ಆಗಾಗ್ಗೆ ಮೂತ್ರ ವಿಸರ್ಜನೆ
ಹಸಿವು ಅಥವಾ ಹಸಿವು ಆಗದೇ ಇರುವುದು ಸೇರಿದಂತೆ ಇನ್ನು ಅನೇಕ ರೋಗಲಕ್ಷಣಗಳು ಕಿಟೋ ಡಯಟ್ ಮಾಡುವವರು ಬಾಧಿಸುತ್ತದೆ.