ಬೆಂಗಳೂರು: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದ್ದರೆ. ಈ ಅರ್ಧಶತಕ ಹೋರಾಟದಲ್ಲಿ 3 ಸಿಕ್ಸರ್ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ ಇದೀಗ ಆರ್ಸಿಬಿ ಪರ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್ ಅನ್ನೋ ದಾಖಲೆ ಬರೆದಿದ್ದಾರೆ. ಇಷ್ಟೇ ಅಲ್ಲ ಕ್ರಿಸ್ ದಾಖಲೆ ಮುರಿದಿದ್ದಾರೆ. ಕೊಹ್ಲಿ ಆರ್ಸಿಬಿ ಪರ 240 ಸಿಕ್ಸರ್ ಸಿಡಿಸಿದ್ದರೆ, ಕ್ರಿಸ್ ಗೇಲ್ 239 ಸಿಕ್ಸರ್ ಮೂಲಕ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಪರ ಗರಿಷ್ಠ ಸಿಕ್ಸರ್ ದಾಖಲೆ
ವಿರಾಟ್ ಕೊಹ್ಲಿ : 240
ಕ್ರಿಸ್ ಗೇಲ್ : 239
ಎಬಿ ಡಿವಿಲಿಯರ್ಸ್ : 238
ಗ್ಲೆನ್ ಮ್ಯಾಕ್ಸ್ವೆಲ್ : 67
ಫಾಫ್ ಡುಪ್ಲೆಸಿಸ್ : 50
ಐಪಿಎಲ್ 2024ರ ಟೂರ್ನಿಯಲ್ಲಿ ಕೊಹ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಆರೇಂಜ್ ಕ್ಯಾಪ್ ಹೋಲ್ಡರ್ ಆಗಿರುವ ಕೊಹ್ಲಿ ದಿಟ್ಟ ಹೋರಾಟದ ಮೂಲಕ ಎದುರಾಗಳಿಗೆ ನಡುಕ ಹುಟ್ಟಿಸಿದ್ದಾರೆ.