ಕೋಲಾರ: ಬಂಜೆತನ ನಿವಾರಣೆಗೆ ಬೇಕಾದ ಎಲ್ಲಾ ರೀತಿಯ ಗುಣಮಟ್ಟದ ಹಾಗೂ ಕಡಿಮೆ ದರದಲ್ಲಿ ಚಿಕಿತ್ಸೆ ಪ್ರಸ್ತುತ ಬೇಬಿ ಸೈನ್ಸ್ ಐ.ವಿ.ಎಫ್ ಕ್ಲೀನಿಕ್ ನಲ್ಲಿ ದೊರೆಯುತ್ತಿದ್ದು, ಚಿನ್ನದನಾಡಿನ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ರಾಜ್ಯಗಳ ಜನತೆ ಈ ಸೌಲಭ್ಯ ಬಳಸಿಕೊಳ್ಳುವಂತೆ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷ ಹಾಗೂ ಮಂಜುನಾಥ ಹೆಲ್ತ್ ಕೇರ್ ಸೆಂಟರ್ ನ ಡಾ.ನಾರಾಯಣ ಸ್ವಾಮಿ ಅವ್ರು ಹೇಳಿದ್ರು.
ಇಂದು ನಗರದಲ್ಲಿ ಬೇಬಿ ಸೈನ್ಸ್ ಐ.ವಿ.ಎಫ್ ಕ್ಲೀನಿಕ್ ನಲ್ಲಿ ನೂತನವಾಗಿ ಅಳವಡಿಸಿರುವ ಐ.ವಿ.ಎಫ್ ಕಲ್ಚರಲ್ ಲ್ಯಾಬ್ ನ್ನು ಉದ್ಘಾಟಿಸಿ ಮಾತನಾಡಿದ್ರು, ನೂತನವಾಗಿ ಅಳವಡಿಸಿರುವ ಲ್ಯಾಬ್ ನಿಂದ ಜನತೆಗೆ ಗುಣಮಟ್ಟದ ಹಾಗೂ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೌಲಭ್ಯ ಸಿಗುವಂತಾಗಲಿ ಮತ್ತು ಬಂಜೆತನ ನಿವಾರಣೆಯಾಗಿ ಹೆಚ್ಚು ಹೆಚ್ಚು ಮಹಿಳೆಯರು ಮಕ್ಕಳಿಗೆ ಜನ್ಮ ನೀಡಲಿ ಎಂದು ತಿಳಿಸಿದ್ರು.
ಇತ್ತಿಚಿನ ದಿನಗಳಲ್ಲಿ ಬಂಜೆತನ ಒಂದು ಸಮಸ್ಯೆಯಾಗಿ ಕಾಡುತ್ತಿದ್ದು,ಇದರ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳ ಬೇಕಾಗಿತ್ತು ಹಾಗೂ ದುಬಾರಿ ವೆಚ್ಚವಾಗುತ್ತಿತ್ತು,ಆದರೆ ಈಗ ದೇಶದಲ್ಲಿ 12 ಸೆಂಟರ್ ಗಳಿದ್ದು ಕೋಲಾರ ನಗರದಲ್ಲೇ ಉತ್ತಮ ಗುಣಮಟ್ಟದ ಹಾಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಯನ್ನು ಬೇಬಿ ಸೈನ್ಸ್ ಐ.ವಿ.ಎಫ್ ಕ್ಲೀನಿಕ್ ಆಡಳಿತ ಮಂಡಲಿ ನೀಡಲಿ ಎಂದು ಸಲಹೆ ನೀಡಿದರು.
ಬೇಬಿ ಸೈನ್ಸ್ ಐ.ವಿ.ಎಫ್ ಕ್ಲೀನಿಕ್ ನ ವೈದ್ಯಕೀಯ ನಿರ್ದೇಶಕ ಡಾ.ಸಿ.ಎಸ್.ಮಂಜುನಾಥ್ ಮಾತನಾಡಿ ನಮ್ಮ ಸಂಸ್ಥೆ ದೇಶದಲ್ಲಿ ಸೆಂಟರ್ ಗಳನ್ನು ಹೊಂದಿದ್ದು,ಸುಮಾರು ಮೂರು ಸಾವಿರ ಮಂದಿಗೂ ಹೆಚ್ಚು ಮಹಿಳೆಯರು ಚಿಕಿತ್ಸೆ ಪಡೆದಿದ್ದು ಶೇ 70 ರಷ್ಟು ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ,ಕೋಲಾರ ನಗರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭವಾದ ನಮ್ಮ ಕ್ಲೀನಿಕ್ ನಲ್ಲಿ 150 ಕ್ಕೂ ಹೆಚ್ಚಿನ ಮಹಿಳೆಯರು ಚಿಕಿತ್ಸೆ ಪಡೆದಿದ್ದು ಶೇ 60 ರಷ್ಟು ಮಹಿಳೆಯರು ಮಕ್ಕಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.