ಕೊಪ್ಪಳ: ಬೈಕ್ ಗೆ ಲಾರಿ ಡಿಕ್ಕಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗ್ರಾಮದ ಕೆಸರಟ್ಟಿ ಗ್ರಾಮದ ಬಳಿ ನಡೆದಿದೆ.
ಮಂಜುನಾಥ ನಾಯಕ್ (38) ನೇತ್ರಾವತಿ ನಾಯಕ್(33) ಮೃತ ದಂಪತಿಯಾಗಿದ್ದು, ಮೃತರು ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ನಿವಾಸಿಗಳು. ಕೂಲಿ ಕೆಲಸಕ್ಕೆ ಗಂಗಾವತಿ ಗೆ ಹೋಗುತ್ತಿದ್ದ ದಂಪತಿ ವೇಳೆಯಲ್ಲಿ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.