ಬೆಂಗಳೂರು: ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿಗಳಾದ HD ಕುಮಾರಸ್ವಾಮಿ ಅವರನ್ನು ಜೆ ಪಿ ನಗರದ ನಿವಾಸದಲ್ಲಿ ಸೌಹಾರ್ಧ ಭೇಟಿ ಮಾಡಿ ಮಾತುಕತೆ ನಡೆಸಿದರು.
ಇಲ್ಲಿನ ಜೆಪಿ ನಗರ ನಿವಾಸದ ಬಳಿ ಮಾತನಾಡಿದ ಅವರು, ಕೋರ್ ಕಮಿಟಿ ಸಭೆಯಲ್ಲಿ ಮಂಡ್ಯ, ಕೋಲಾರ ಕ್ಷೇತ್ರಗಳ ಬಗ್ಗೆ ಚರ್ಚೆ ಆಗಿದೆ. ಮಂಡ್ಯಕ್ಕೆ ಕುಮಾರಸ್ವಾಮಿ ಅವರ ಹೆಸರೇ ಅಧಿಕೃತ ಆಗಿದೆ ಎಂದು ಹೇಳಿದ್ದಾರೆ.
ಕೋಲಾರ ಅಭ್ಯರ್ಥಿ ವಿಚಾರವಾಗಿ, ಈಗಾಗಲೇ ದೇವೇಗೌಡರು ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ದೇವೇಗೌಡರ ನಿರ್ಧಾರವೇ ಅಂತಿಮ. ದೇವೇಗೌಡರು ಎಲ್ಲಾ ನಾಯಕರ ಭಾವನೆ ತಿಳಿದುಕೊಂಡು ನಿರ್ಧಾರ ಘೋಷಣೆ ಮಾಡಿರುತ್ತಾರೆ. ಮಲ್ಲೇಶ್ ಬಾಬು ಅವರ ಹೆಸರು ಘೋಷಣೆ ಮಾಡಿದ್ದಾರೆ. ಮಲ್ಲೇಶ್ ಬಾಬು ಮೃದು ಸ್ವಾಭಾವದ ವ್ಯಕ್ತಿ. ಪಕ್ಷಕ್ಕೆ ನಿಷ್ಠೆ ಇರುವ ವ್ಯಕ್ತಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದರು. ಮಲ್ಲೇಶ್ ಬಾಬು ಜೊತೆಗೆ ನಿಸರ್ಗ ನಾರಾಯಣಸ್ವಾಮಿ, ಸಂಮೃದ್ಧಿ ಮಂಜುನಾಥ್ ಕೂಡಾ ಆಕಾಂಕ್ಷಿ ಇದ್ದಾರೆ. ಕೋಲಾರದ ಮುಖಂಡರ ಸಭೆ ಮಾಡ್ತಿದ್ದೇನೆ. ಅಲ್ಲಿ ಚರ್ಚೆ ಮಾಡಿ ಇಂದೇ ಅಂತಿಮ ತೀರ್ಮಾನ ಮಾಡ್ತೀವಿ ಅಂತ ತಿಳಿಸಿದ್ದಾರೆ.