ಕೊಟ್ಟೂರು: ಲಕ್ಷಾಂತರ ಭಕ್ತರ ಆರಾಧ್ಯದೈವ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠವನ್ನು ಕಾರ್ತೀಕೋತ್ಸವದ ಮುನ್ನಾ ಸೋಮವಾರದ ನಿಮಿತ್ತ ಶ್ರೀಸ್ವಾಮಿಯ ಪರಮ ಭಕ್ತರಾದ ಪಟ್ಟಣದ ಸಹೋದರ ಬಣಕಾರ ಕೊಟ್ರೇಶ ಮತ್ತು ಮೂಗಣ್ಣ ಇವರು ಇಡೀ ದೇವಸ್ಥಾನವನ್ನು ವಿವಿಧ ಬಗೆಯ ಹೂವಿನ ಮಾಲೆಗಳೊಂದಿಗೆ ಶೃಂಗರಿಸಿ ಭಕ್ತರನ್ನು ಆಕರ್ಷಿಸುವ ಮೂಲಕ ಶ್ರೀಸ್ವಾಮಿಗೆ ತಮ್ಮ ಸೇವೆಯನ್ನು ಸಲ್ಲಿಸಿದರು.
ಕಳೆದ ೮ ವರ್ಷಗಳಿಂದ ಪ್ರತಿ ಕಾರ್ತೀಕ ಮಾಸದಲ್ಲಿ ದೇವಸ್ಥಾನವನ್ನು ಹೂವುಗಳಿಂದ ಶೃಂಗರಿಸುವ ಸೇವೆಯನ್ನು ಮುಂದುವರೆಸಿಕೊAಡು ಬಂದಿರುವ ಭಕ್ತ ಸಹೋದರರಾದ ಬಣಕಾರ ಕೊಟ್ರೇಶ ಮತ್ತು ಮೂಗಣ್ಣ ಈ ಭಾರಿ ೯ನೇ ವರ್ಷದಲ್ಲೂ ಭರ್ಜರಿ ಹೂವುಗಳ ರಾಶಿಯೊಂದಿಗೆ ದೇವಸ್ಥಾನವನ್ನು ಶೃಂಗರಿಸುವ ಸೇವೆಗೈದರು.
ದೇವಸ್ಥಾನವನ್ನು ಹೂವುಗಳಿಂದ ಶೃಂಗರಿಸಲೆAದೇ ಬೆಂಗಳೂರಿನಿAದ ವಿಶೇಷವಾಗಿ ೯ ವಿಧದ ಹೂಗಳಾದ ಬಿಡಿ ಸೇವಂತಿಗೆ, ಪೂರ್ಣಿಮಾ, ಕೆಂಪು, ಕಾವೇರಿ, ಕೆಂಪು ಕಾವೇರಿ, ಹಸಿರು ಸೇವಂತಿಗೆ, ಬಟನ್, ಕನಕಾಂಬರಿ, ಮಲ್ಲಿಗೆ, ಸೇವಂತಿಗೆ, ಚೆಂಡು ಹೂವುಗಳನ್ನು ಸುಮಾರು ೧.೫೦ ಲಕ್ಷಕ್ಕೂ ಅನೇಕ ಹಣ ವ್ಯಯಿಸಿ ತಂದಿದ್ದರು.
ಈ ಸೇವೆಯನ್ನು ಸಲ್ಲಿಸಲೆಂದೇ ಭಾನುವಾರ ಇಡೀ ರಾತ್ರಿ ದೇವಸ್ಥಾನದ ಬಳಿಯ ಯುವಕರು ಭಕ್ತರು ಮತ್ತಿತರರೊಡಗೂಡಿ ಶೃಂಗರಿಸುವ ಕಾರ್ಯ ಕೈಗೊಂಡರು. ಸೋಮವಾರದ ಬೆಳಗಿನ ಐದು ಗಂಟೆಯೊಳಗೆ ಹೂಗಳ ಅಲಂಕಾರದೊAದಿಗೆ ಕೊಟ್ಟೂರೇಶ್ವರ ಸ್ವಾಮಿ ವಿಶೇಷವಾಗಿ ಕಂಗೋಳಿಸಲು ಸಿದ್ದಗೊಂಡಿತು.