2019ರಲ್ಲಿ ತೆರೆಕಂಡ ಉಪ್ಪೇನಾ ಸಿನಿಮಾ ಮೂಲಕ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ನಟಿ ಕೃತಿ ಶೆಟ್ಟಿ ರಾತ್ರೋ ರಾತ್ರಿ ಸಖತ್ ಖ್ಯಾತಿ ಘಳಿಸಿದರು. ಬಳಿಕ ಬ್ಯಾಕ್ ಟು ಬ್ಯಾಕ್ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಕೃತಿ ಬಣ್ಣ ಹಚ್ಚುತ್ತಿದ್ದಾರೆ. ಆದರೆ ನಟಿಗೆ ಹೇಳಿಕೊಳ್ಳುವ ಮಟ್ಟಿಗೆ ಸಕ್ಸಸ್ ಸಿಕ್ಕಿಲ್ಲ. ಈ ಮಧ್ಯೆ ತಾನು ರಿಲೇಷನ್ ಶಿಪ್ ನಲ್ಲಿದ್ದೇನೆ ಎಂದು ಹೇಳುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾಳೆ ನಟಿ ಕೃತಿ ಶೆಟ್ಟಿ.
ನಟಿ ಕೃತಿ ಶೆಟ್ಟಿ ‘ಮನಮೆ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ ನಾನು ರಿಲೇಷನ್ಶಿಪ್ನಲ್ಲಿದ್ದೇನೆ ಅಂತ ಹೇಳುವ ಮೂಲಕ ಪಡ್ಡೆ ಹುಡುಗರಿಗೆ ಶಾಕ್ ನೀಡಿದ್ದಾಳೆ.
ಶ್ರೀರಾಮ್ ಆದಿತ್ಯಾ ನಿರ್ದೇಶನದ ವಿಶ್ವಾ ಪ್ರಸಾದ್ ನಿರ್ಮಾಣದ ಮನಮೆ ಸಿನಿಮಾ ಇದೇ ಜೂನ್7ರಂದು ತೆರೆಗೆ ಬರಲಿದೆ. ಚಿತ್ರದಲ್ಲಿ ಕೃತಿಗೆ ಜೋಡಿಯಾಗಿ ಶರ್ವಾನಂದ್ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿರುವ ಕೃತಿ ಹಾಗೂ ಶರ್ವಾನಂದ್ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳನ್ನು ಕೊಡ್ತಿದ್ದಾರೆ. ಸಿನಿಮಾ ಮಾತ್ರವಲ್ಲ ವೈಯಕ್ತಿಕ ಬದುಕಿನ ಬಗ್ಗೆ ನಟಿ ಓಪನ್ ಆಗಿ ಮಾತನಾಡಿದ್ದಾರೆ. ಸಿಂಗಲ್ ಆಗಿದ್ದೀರಾ? ಅಥವಾ ರಿಲೇಷನ್ಶಿಪ್ನಲ್ಲಿದ್ದೀರಾ? ಎಂದು ನಿರೂಪಕಿ ಕಡೆಯಿಂದ ಬಂದ ಪ್ರಶ್ನೆಗೆ ಅಚ್ಚರಿಯ ಉತ್ತರ ನೀಡಿದ್ದಾರೆ ನಟಿ.
ಸಿಂಗಲ್ ಅಲ್ಲ, ನಾನು ರಿಲೇಷನ್ಶಿಪ್ನಲ್ಲಿದ್ದೇನೆ ಎಂದು ನಟಿ ಉತ್ತರಿಸಿದ್ದರು. ಬಳಿಕ ಯಾರೊಂದಿಗೆ ಎಂಗೇಜ್ ಆಗಿದ್ದೀರಾ ಎಂದು ಕೇಳಲಾದ ಪ್ರಶ್ನೆಗೆ ನಗುತ್ತಾ ನಾನು ನನ್ನ ಕೆಲಸದ ಜೊತೆ ಎಂಗೇಜ್ ಆಗಿದ್ದೇನೆ ಎಂದು ಕೃತಿ ಶೆಟ್ಟಿ ಜಾಣ್ಮೆಯ ಉತ್ತರ ನೀಡಿದ್ದರು. ಒಂದು ಕ್ಷಣ ಕೃತಿ ಉತ್ತರ ಕೇಳಿ ಅಭಿಮಾನಿಗಳು ದಂಗಾದರು. ಆ ನಂತರ ಕೆಲಸದ ಜೊತೆ ಬ್ಯುಸಿ ಇದ್ದೇನೆ ಎಂಬ ಉತ್ತರ ಕೇಳಿ ಕೊಂಚ ನಿರಾಳರಾಗಿದ್ದಾರೆ.