ಬೆಂಗಳೂರು/ಬಳ್ಳಾರಿ: ಇಂದು (ಸೋಮವಾರ) ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ, ಮಾಜಿ ಮಂತ್ರಿ ಗಾಲಿ ಜನಾರ್ದನ ರೆಡ್ಡಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಪಕ್ಷ ಸೇರ್ಪಡೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಜನಾರ್ದನ ರೆಡ್ಡಿ ಯಾವುದೇ ಷರತ್ತುಗಳು ಇಲ್ಲದೇ ಬಿಜೆಪಿ (BJP) ಸೇರ್ಪಡೆಯಾಗಲಿದ್ದಾರೆ. ಜನಾರ್ಧನರೆಡ್ಡಿ ಬಿಜೆಪಿ ಸೇರುವ ಮೊದಲ ಭಾಗವಾಗಿ ಕಳೆದ ವಾರ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಭೇಟಿಯಾದ ರೆಡ್ಡಿ ಬಿಜೆಪಿಗೆ ಸೇರೋ ಗ್ರೀನ್ ಸಿಗ್ನಲ್ ಪಡೆದ್ರು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ತಮ್ಮ ನಿವಾಸ ಪಾರಿಜಾತದಲ್ಲಿ KRPP ಪಕ್ಷದ ಮುಖಂಡರ ಸಭೆ ಮಾಡಿ ಚರ್ಚೆ ನಡೆಸಿದ್ರು. ಸಭೆಯಲ್ಲಿ ಪಕ್ಷದ ಮುಖಂಡರು ಏನೇ ನಿರ್ಧಾರ ಮಾಡಿದ್ರು ನಾವು ಜೊತೆಗಿರ್ತೀನಿ ಎಂದ್ಮೇಲೆ ಜನಾರ್ಧನರೆಡ್ಡಿ ಬಿಜೆಪಿ ಪಕ್ಷಕ್ಕೆ ಸೇರುವ ನಿರ್ಧಾರ ಮಾಡಿದ್ರು.. ಸಭೆ ನಂತರ ಮಾತನಾಡಿದ ರೆಡ್ಡಿ ನಾನು ಬಿಜೆಪಿ ಪಕ್ಷದಲ್ಲಿ 25ನೇ ವಯಸ್ಸಿನಿಂದ ಕೆಲಸ ಮಾಡ್ತಿದ್ದೇನೆ, ಲಾಲ್ ಕೃಷ್ಣ ಅಡ್ವಾಣಿ ಯವರ ರಥಯಾತ್ರೆಯಲ್ಲಿ ಪಕ್ಷದಲ್ಲಿದ್ದೆ.
ತಾಯಿ ಸಮಾನವಾದ ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆಯಾಗ್ತಿದ್ದೀನಿ ಇಂದು ಬೆಳಿಗ್ಗೆ 10 ಗಂಟೆಗೆ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ ವಿಜಯೇಂದ್ರ ಮತ್ತು ಪ್ರಬಾರಿ ರಾಧಾ ಮೊಹನ್ ದಾಸ್ ಅಗರ್ವಾಲ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗ್ತೇನೆ. KRPP ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡ್ತಿದ್ದೀನಿ ಮೋದಿ ಮತ್ತೊಮ್ಮೆ ಪ್ರಧಾನಿ ಯಾಗಲು ಪಕ್ಷಕ್ಕೆ ಸೇರ್ಪಡೆಯಾಗ್ತೇನೆ ನಾನು ಯಾವುದೇ ಬೇಡಿಕೆ ಇಟ್ಟು ಪಕ್ಷಕ್ಕೆ ಹೋಗ್ತಿಲ್ಲ ನನ್ನ ಮನೆಗೆ ನಾನು ಹೋಗ್ತಿದ್ದೀನಿ ಎಂದ್ರು ರೆಡ್ಡಿ.