ಬೆಂಗಳೂರು:- KSRTC ಗೆ ಮತ್ತಷ್ಟು ಹೊಸ ಬಸ್ ಗಳು ಎಂಟ್ರಿ ಕೊಡಲಿದ್ದು, ನೂತನವಾಗಿ ನೂರು ಬಸ್ ಗಳನ್ನ ಕೆಎಸ್ ಆರ್ ಟಿಸಿ ನಿಗಮ ಖರೀದಿಸಿದೆ.
ನೂತನ ಬಸ್ ಗಳನ್ನು ನಾಳೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಗಳ ಮೇಲೆ ಸಿಎಂ ಸಿದ್ದರಾಮಯ್ಯರಿಂದ ಲೋಕಾರ್ಪಣೆ ಆಗಲಿದೆ, ಶಕ್ತಿ ಯೋಜನೆಯಿಂದ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆ ಆಗಲಿದೆ.
ಹೀಗಾಗಿ ಹೊಸ ಬಸ್ಸುಗಳನ್ನ ರಸ್ತೆಗಿಳಿಸಲು ಕೆಎಸ್ಆರ್ಟಿಸಿ ಮುಂದಾಗಿದೆ. 100 ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸುಗಳ ಲೋಕಾರ್ಪಣೆ ಆಗಲಿದೆ. ಅಶ್ವಮೇಧ ಕ್ಲಾಸಿಕ್ ಹೆಸರಿನಲ್ಲಿ ಬಸ್ ಗಳ ವಿನ್ಯಾಸ ಇದ್ದು, ನಾಳೆ ಬೆಳಗ್ಗೆ 10.30ಕ್ಕೆ ಬಸ್ ಗಳಿಗೆ ಹಸಿರು ನಿಶಾನೆ ತೋರಲಾಗುತ್ತದೆ.