ಬೆಂಗಳೂರು ; ನಗರದ ಪೂರ್ವ ತಾಲೂಕು, ಕೆ.ಆರ್.ಪುರ ತಹಶೀಲ್ದಾರ್ ಎಸ್. ಅಜಿತ್ಕುಮಾರ್ ರೈ ಮನೆ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದರು.
ಈ ವೇಳೆ ಅಜಿತ್ ಮನೆಯಲ್ಲಿ ಭಾರಿ ಪ್ರಮಾಣದ ಆಲ್ಕೋಹಾಲ್ ಪತ್ತೆಯಾಗಿದೆ. ಅಜಿತ್ ಮನೆಯಲ್ಲಿ ವಿದೇಶಿ ಬ್ರ್ಯಾಂಡ್ನ 16.2 ಲೀ. ಆಲ್ಕೋಹಾಲ್ ಪತ್ತೆಯಾಗಿದ್ದು, ಅದರ ಮೌಲ್ಯ 1.45 ಲಕ್ಷ ರೂ. ಎಂದು ಅಬಕಾರಿ ಅಧಿಕಾರಿಗಳು ಅಂದಾಜಿಸಿದ್ದು, ಅದನ್ನು ಲೋಕಾಯುಕ್ತ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಅಜಿತ್ಕುಮಾರ್ ಮನೆಯಲ್ಲಿ 40 ಲಕ್ಷ ರೂ. ನಗದು ಮಾತ್ರವಲ್ಲದೆ, 1.9 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ ಪತ್ತೆಯಾಗಿವೆ. ಅಜಿತ್ ಮನೆಯಲ್ಲಿ ಐಷಾರಾಮಿ ಕಾರುಗಳೂ ಪತ್ತೆಯಾಗಿದೆ.