ಬೆಂಗಳೂರು: ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧೆ ವಿಚಾರ ಬಗ್ಗೆ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಎಲ್ಲಾದರೂ ನಿಂತುಕೊಳ್ಲಲಿ ನಮಗೇನು ಟೆನ್ಷನ್ ಇಲ್ಲ ಮಂಡ್ಯ ಅಂದ್ರೆ ಇಂಡಿಯಾ ಅಂತಾರೆ ಮಂಡ್ಯದ ಸೌಂಡ್ ಇದ್ದೇ ಇರುತ್ತದೆ . ಯಾವ ಅಭ್ಯರ್ಥಿಯನ್ನು ಅವರು ಹಾಕಿದ್ರೂ ಹಾಕಲಿ ಎಂದು ಹೇಳಿದರು.
ಸುಮಲತಾ ಅವರನ್ನು ಕಾಂಗ್ರೆಸ್ ಗೆ ಕರೆತರುವ ವಿಚಾರ ಬಗ್ಗೆ ಮಾತನಾಡಿದ ಅವರು, ಈ ವಿಚಾರ ನನಗೆ,ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ ಮೇಡಂ ಜೊತೆ ನಾನು ಮಾತಾಡಿಲ್ಲ ಯಾರು ಮಾತಾಡಿದ್ದಾರೆ ಅಂತ ಮೇಡಂ ಗೆ ಕೇಳಬೇಕು ಮೊನ್ನ ಅವ್ರೇ ಮೀಟಿಂಗ್ ಮಾಡಿದ್ದಾರೆ ಮಂಡ್ಯ ಸೀಟ್ ಬಿಟ್ಟುಕೊಡಲ್ಲ ಎಂದು ಹೇಳಿದ್ದಾರೆ.
ಮೈತ್ರಿಯಲ್ಲಿ ಗೊಂದಲವಿರೋ ವಿಚಾರ ಬಗ್ಗೆ ಮಾತನಾಡಿದ ಅವರು, ಅವರ ಗೊಂದಲವನ್ನು ಅವರೇ ಸರಿ ಮಾಡಬೇಕು ಬಿಜೆಪಿಯ ಗೊಂದಲ ಸರಿ ಮಾಡಲು ಹರ ಸಾಹಸ ಪಡ್ತಿದ್ದಾರೆ ಸೋಮಣ್ಣನ ಕರೆದು ಮಾತಾಡಿದ್ರು ಇನ್ನು ಏನೇನ್ ಮಾಡ್ತಾರೋ ಮಾಡಲಿ ಬಿಜೆಪಿ, ಜೆಡಿಎಸ್ ಹಾಕ್ತಾರೋ ನೋಡೋಣ ಒಂದು ಗುಂಪು ಪ್ರಬಲವಾಗಿ ಸುಮಲತಾ ಪರವಾಗಿ ಸಭೆ ಮಾಡಿದ್ದಾರೆ.
ನರೇಂದ್ರಸ್ವಾಮಿಗೆ ನಿಗಮಮಂಡಳಿ ನೀಡಿ ವಾಪಾಸ್ ಪಡೆದಿರೋ ವಿಚಾರ ಮಾಲಿನ್ಯ ವಿಚಾರ ಕೋರ್ಟನಲ್ಲಿದೆ ನರೇಂದ್ರ ಸ್ವಾಮಿ ಯಾವುದು ಕೇಳಿದ್ದಾರೋ ಅದನ್ನ ಹೈಕಮಾಂಡ್,ಸಿಎಂ ಡಿಸಿಎಂ ಕೇಳಿದ್ದಾರೆ ಅವರು ಮಾಲಿನ್ಯ ಮಂಡಳಿ ಆದ್ರೆ ಓಕೆ ಇಲ್ಲದಿದ್ರೆ ಚುನಾವಣೆ ಆದಮೇಲೆ ಸಚಿವರನ್ನಾಗಿ ಮಾಡಿ ಅಂದಿದ್ದಾರೆ ಅದನ್ನ ಪಾರ್ಟಿ ಪರಿಗಣಿಸುತ್ತೆ.
ಸಚಿವರುಗಳಲ್ಲಿ ಅಸಮಾಧಾನ ವಿಚಾರ ನಾನು ಹೈಕಮಾಂಡ್ಗಿಂತ ದೊಡ್ಡವನು ಅಲ್ಲ ನನ್ನ ಅಭಿಪ್ರಾಯ ಹೈಕಮಾಂಡ್ ಗೆ ರಾಜ್ಯದ ನಾಯಕರಿಗೆ ಕೊಟ್ಟಿದ್ದೆನೆ ಈಗ ಆದವರೆಲ್ಲ ನಮ್ಮ ಪಕ್ಷ ಶಾಸಕರು ಎಲ್ಲಾ ಸಮಾಧಾನವಾಗಿದ್ದಾರೆ ಎಂದ ಚಲುವರಾಯಸ್ವಾಮಿ.