ಬೆಂಗಳೂರು: ಮಾಜಿ ಸಿಎಂ, ಕೇಂದ್ರ ಸಚಿವ ಕುಮಾರಸ್ವಾಮಿ, ಡಿಸಿಎಂ ಡಿ.ಕೆ ಶಿವಕುಮಾರ್ ರಾಜಕೀಯ ವೈರತ್ವದ ಮಧ್ಯೆನೇ ರಾಮನಗರ ಅನ್ನೋ ಹೆಸರು ಮಾಯವಾಗ್ತಿದೆ. ಇನ್ಮುಂದೆ ರಾಮನಗರ ಅಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಬದಲಾಗುತ್ತಿದೆ. ಇದರ ನಡುವೆಯೇ ರಾಮನಗರ ಹೆಸರು ಬದಲಾವಣೆ ವಿಚಾರ ಕೇಂದ್ರ ಸಚಿವರು ಹಾಗೂ ಡಿಸಿಎಂ ನಡುವಿನ ವಾಕ್ ಸಮರಕ್ಕೆ ಕಾರಣವಾಗಿದೆ.
ರಾಮನಗರ ಹೆಸರು ತೆಗೆದವರ ಸರ್ವನಾಶ ಎಂಬ ಹೆಚ್ಡಿಕೆ ಹೇಳಿಕೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಕುಮಾರಸ್ವಾಮಿ ಯಾವಾಗಲೂ ನನ್ನ ಸರ್ವನಾಶ ಮಾಡಲು ಬಯಸ್ತಾರೆ. ಪ್ರತಿ ದಿನ ರಾಜಕಾರಣ, ಮಲಗಿದ್ದು ಎಲ್ಲಾ ಹೇಳ್ತಾರೆ. ನನ್ನ ಸರ್ವನಾಶವನ್ನೇ ಬಯಸಿಕೊಂಡು ಬಂದಿದ್ದಾರೆ. ಅವರ ಆಚಾರ, ವಿಚಾರ ಎಲ್ಲಾ ಅರಿವಿದೆ.
ರಾಮನಗರ ಜಿಲ್ಲೆ ಮರುನಾಮಕರಣ ವಿಚಾರವಾಗಿ ಎಚ್ಡಿಕೆ ಅವರಿಗೆ ನೇರ ಸವಾಲು ಹಾಕಿರುವ ಡಿಸಿಎಂ ಡಿಕೆ ಶಿವಕುಮಾರ್, ಮತ್ತೆ ಹೆಸರು ಬದಲಾವಣೆ ಅವರ ಹಣೆಯಲ್ಲೂ ಬರೆದಿಲ್ಲ, ಬರೆದಿಟ್ಕೊಳ್ಳಿ ದಾಖಲೆ ಬೇಕಾಗುತ್ತೆ. 2028ಕ್ಕೆ ಇದೇ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದರು.
ಇತ್ತ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ಮಾಡಿದ ಎಂಎಲ್ಸಿ ರವಿ, ರಾಮನಗರದ ಹೆಸರು ಎಲ್ಲೂ ಬದಲಾಗಿಲ್ಲ. ರಾಮನಗರ ತಾಲೂಕು ರಾಮನಗರ ತಾಲೂಕಾಗಿಯೇ ಉಳಿಯುತ್ತೆ. ಕುಮಾರಸ್ವಾಮಿ ಹೇಳಿಕೆ ಅವರ ಯೋಗ್ಯತೆ ತೋರಿಸುತ್ತೆ, ಪುಕ್ಕಟ್ಟೆ ಪ್ರಚಾರಕ್ಕೆ ಈ ರೀತಿ ಹೇಳಿಕೆ ತರವಲ್ಲ. ಯೋಗ್ಯತೆಗೆ ತಕ್ಕನಾದ ಹೇಳಿಕೆ ಇದಲ್ಲ ಎಂದರು.