ಚಿಕ್ಕಬಳ್ಳಾಪುರ: ಕಿಲಾಡಿ ಲೇಡಿಗಳು ಹಾಡು ಹಗಲೇ ಮೇಕೆಗಳನ್ನು ಕದ್ದು ಸಿಕ್ಕಿಬಿದ್ದ ಘಟನೆ ಚಿಂತಾಮಣಿ ತಾಲ್ಲೂಕಿನ ಕೊಂಗನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೇಕೆ ಕದ್ದ ಹೈಜಾಕ್ ಮಾಡಿದ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಯಾಜುದ್ದೀನ್, ದಿಲ್ ಶಾದ್ , ಓರ್ವ ಬಾಲಕ ಹಾಗೂ ಬಾಲಕಿ ಸೇರಿ ಮೇಕೆ ಕದ್ದ ಕದೀಮರು. ಇವರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಾಶ್ಮೀರಿ ಸೀಡ್ ಮೇಕೆ ಮರಿಗಳನ್ನು ಕದ್ದಿದ್ದಾರೆ. ಖದೀಮರನ್ನು ಬೆಂಗಳೂರು ಮೂಲದ ಬನ್ನೇರುಘಟ್ಟ ನಿವಾಸಿಗಳು ಎಂದು ತಿಳಿದುಬಂದಿದೆ.
ಮೇಕೆ ಕದ್ದು ಬೆಂಗಳೂರು ಕಡೆ ಎಸ್ಕೇಪ್ ಆಗುತ್ತಿದ್ದ ವೇಳೆ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಈ ವಿಚಾರ ಗಮನಕ್ಕೆ ಬಂದಂತೆ ಮಾಲೀಕರು ಕಿಲಾಡಿ ಕಳ್ಳರನ್ನು ಸಿನಿಮೀಯಾ ರೀತಿಯಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.