ಲಕ್ಷದೀಪೋತ್ಸವ ಸಂಭ್ರಮ: ಹರಿದುಬಂದ ಭಕ್ತಸಾಗರ

ಜಿಲ್ಲೆ

ಹುಬ್ಬಳ್ಳಿ: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ನಿನ್ನೆ 25ನೇ ಲಕ್ಷದೀಪೋತ್ಸವವನ್ನ ಅದ್ಧೂರಿಯಾಗಿ ಆಚರಿಸಲಾಯಿತು. ಪ್ರತಿ ವರ್ಷದಂತೆ ಕಾರ್ತಿಕ ಮಾಸದಲ್ಲಿ ಈ ಲಕ್ಷದೀಪೋತ್ಸವವನ್ನ ಆಚರಣೆ ಮಾಡಲಾಗುತ್ತದೆ. ನಿನ್ನೆ ಮಠದ ಆವರಣದ ತುಂಬ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರಗಳ ಮೇಲೆ ಲಕ್ಷಾಂತರ ದೀಪಗಳನ್ನ ಜೋಡಿಸಿ ಇಡಲಾಗಿತ್ತು.

ನೆರೆದಿದ್ದ ಲಕ್ಷಾಂತರ ಭಕ್ತರು ಮಹಾಂಗಳಾರತಿ ಬಳಿಕ ದೀಪಗಳನ್ನ ಹಚ್ಚಿ ಶ್ರೀ ಸಿದ್ಧಾರೂಢರಿಗೆ ಭಕ್ತಿಭಾವದಿಂದ ಸಮರ್ಪಿಸಿದರು. ಅದರಲ್ಲೂ ಮಹಿಳೆಯರಿಗಂತೂ ಈ ದೀಪದ ಹಬ್ಬ ಅವರ ಸಂತಸ ಹಿಮ್ಮಡಿಗೊಳಿಸಿತ್ತು. ಕುಟುಂಬ ಸಮೇತ ಬಂದ ಮಹಿಳೆಯರು ದೀಪ ಬೆಳಗಿಸಿ ಬದುಕಿನ ಕತ್ತಲೆಯನ್ನ ಹೋಗಲಾಡಿಸುವಂತೆ ಬೇಡಿಕೊಂಡರು. ಭಕ್ತರು ದೀಪ ಹಚ್ಚುವ ದೃಶ್ಯಗಳನ್ನು ಕಣ್ಣುಗಳಲ್ಲಿತುಂಬಿಕೊಂಡರು.