ಬೆಳಗಾವಿ: 2018ರ ವಿಧಾನಸಭೆ ಚುನಾವಣೆ, ಸಹೋದರ ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಾಗ ಲಕ್ಷ್ಮೀ ಹೆಬ್ಬಾಳಕರ್ ಹಸಿರು ಸೀರೆ ಧರಿಸಿದ್ದರು. ಈಗ ತಮ್ಮ ನಾಮಪತ್ರ ಸಲ್ಲಿಸುವಾಗಲೂ ಅದೇ ಹಸಿರು ಸೀರೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಮಿಂಚಿದ್ದು ವಿಶೇಷವಾಗಿತ್ತು.
ಈ ಹಸಿರು ಸೀರೆಯನ್ನು ಅವರ ತಾಯಿ ಗಿರಿಜಾ ಅವರು ನೀಡಿದ್ದಾರೆ. ಈ ಸೀರೆ ಶುಭ ಸಂಕೇತವಾಗಿರುವುದರಿದ ಹೆಬ್ಬಾಳಕರ್ ಅವರು ಇದನ್ನೇ ಧರಿಸಿ ನಾಮಪತ್ರ ಸಲ್ಲಿಸಿದರು.
ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ನೀಡಿದ ಆಶೀರ್ವಾದ ಹೂ ಸಹಿತ ಡಬ್ಬಿಯಲ್ಲಿ ತಂದಿದ್ದರು. ಈ ಡಬ್ಬಿಯನ್ನು ತಮ್ಮ ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದರು. ಪ್ರತಿ ನಾಮಪತ್ರ ಸಲ್ಲಿಸುವಾಗಲೂ ಹೆಬ್ಬಾಳಕರ್ ದೇವಿಯ ಹೂ ತರುವುದು ವಿಶೇಷ.