ಭಾರತ ಸ್ವತಂತ್ರ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ನಡುವಲ್ಲೇ ಫಲಪುಷ್ಪ ಪ್ರದರ್ಶನಕ್ಕೆ ಸಸ್ಯಕಾಶಿ ಲಾಲ್ ಬಾಗ್ ಸಜ್ಜಾಗುತ್ತಿದೆ.ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ನೋಡುವುದೇ ಸೋಜಿಗ ಮಕ್ಕಳು, ಕುಟುಂಬದೊಂದಿಗೆ ಇಲ್ಲಿಗೆ ಹೋಗಲು ಅದೇನೋ ಆಸಕ್ತಿ ಪ್ರತಿ ಬಾರಿಯು ಡಿಫರೆಂಟ್ ಥೀಮ್ ನಲ್ಲಿ ಫಲಪುಷ್ಪ ಪ್ರಧರ್ಶನ ಮಾಡಿ ನೋಡುಗರ ಕೈ ಬಿಸಿ ಕರೆಯುತ್ತಿದ್ದ ಲಾಲ್ಬಾಗ್ ಇದೀಗ ವಿನೂತನ ಪ್ರದರ್ಶನಕ್ಕೆ ಮುಂದಾಗಿದೆ..
ಅಷ್ಟಕ್ಕೂ ಈ ಬಾರಿ ಫಲ ಪುಷ್ಪ ಪ್ರಧರ್ಶನ ಹೇಗಿರಲಿದೆ ಯಾವ ಥೀಮ್ ನಲ್ಲಿ ಮೂಡಿಬರಲಿದೆ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್…..
ಲಾಲ್ಬಾಗ್ ನಲ್ಲಿ ಸ್ವಾತಂತ್ರೋತ್ಸವಕ್ಕೆ ತೋಟಗಾರಿಕೆ ಇಲಾಖೆ ಸಕಲ ಸಿದ್ಧತೆ ನಡೆಸುತ್ತಿದೆ. ಈ ಬಾರಿ ಅಂಬೇಡ್ಕರ್ ಥೀಮ್ ಅಡಿ ಫಲಪುಷ್ಪ
ಯೆಸ್ ಈ ಬಾರಿ ಸ್ವಾತಂತ್ರೋತ್ಸವ ಪ್ರಯುಕ್ತ ಆಗಸ್ಟ್ 8ರಿಂದ ಆಗಸ್ಟ್ 19ರವರೆಗೆ ಫಲಪುಷ್ಪ ಪ್ರದರ್ಶನ ಅದ್ಧೂರಿಯಾಗಿ ನಡೆಯಲಿದೆ. ವಿವಿಧ ಬಗೆಯ ಅಲಂಕಾರಿಕ, ದೇಶಿ-ವಿದೇಶಿ ಹೂಗಳೊಂದಿಗೆ ತೋಟಗಾರಿಕಾ ಇಲಾಖೆ ಸಿದ್ಧತಾ ಕಾರ್ಯದಲ್ಲಿ ತೊಡಗಿದೆ. ಲಕ್ಷಾಂತರ ವಿಷಯಗಳನ್ನು ಒಳಗೊಂಡ ಹೂವಿನ ಪ್ರತಿಕೃತಿ ಜನರ ಕಣ್ಮನ ಸೆಳೆಯಲಿದೆ…
ಇನ್ನು ಈ ಕುರಿತು ಮಾತನಾಡಿದ ಲಾಲ್ ಬಾಗ್ ಉಪನಿರ್ದೇಶಕಿ ಕುಸುವ,, ಗಾಜಿನ ಮನೆಯಲ್ಲಿ ಅಂಬೇಡ್ಕರ್ ಅವರ ಪುತ್ಥಳಿ, ಕಲಾಕೃತಿಗಳು ಸೇರಿ ಅವರ ಜೀವನದ ಪ್ರಮುಖ ಘಟನೆಗಳ ಛಾಯಾಚಿತ್ರಗಳು, ಸಂಕ್ಷಿಪ್ತ ಮಾಹಿತಿ ಒದಗಿಸುವ ಬ್ಯಾನರ್ಗಳನ್ನು ಅಳವಡಿಸಲಾಗುವುದು. ಗಾಜಿನ ಮನೆಯಲ್ಲಿ ಒಂದು ಭಾಗದಲ್ಲಿ ಸಂಸತ್ ಭವನ, ಅಂಬೇಡ್ಕರ್ ಅವರು ಜನಿಸಿದ ಸ್ಥಳ ಹಾಗೂ ಸಂವಿಧಾನದ ಪ್ರತಿಕೃತಿಗಳನ್ನು ಪುಷ್ಪಗಳಲ್ಲಿ ಅಲಂಕರಿಸುವ ಕುರಿತು ತಜ್ಞರೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು…
ಅಂಬೇಡ್ಕರ್ ಥೀಮ್ ನಿರ್ಮಾಣಕ್ಕೆ 7 ರಿಂದ 8 ಲಕ್ಷ ಹೂವುಗಳನ್ನು ಬಳಸಿಕೊಳ್ಳಲಾಗುತ್ತಿದೆ. ತಮಿಳುನಾಡು, ಕೇರಳ, ಅಸ್ಸಾಂ, ಜಮ್ಮು
ಸೇರಿದಂತೆ ವಿದೇಶೀ ತಳಿಗಳ ಹೂವುಗಳಿಂದ ಅಲಂಕಾರ ಮಾಡಲಾಗುತ್ತಿದೆ. ವಿಶೇಷಾಲಂಕಾರಕ್ಕೆ ಲಾಲ್ಬಾಗ್ ನರ್ಸರಿಯಲ್ಲೇ 1.50 ಲಕ್ಷ ಹೂವುಗಳನ್ನು ನೆಟ್ಟು ತಯಾರಿಸಲಾಗಿದೆ….
ಒಟ್ಟಾರೆಯಾಗಿ ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಈಗಾಗಲೇ ತೋಟಗಾರಿಕೆ ಇಲಾಖೆ ಸಕಲ ಸಿದ್ಧತೆ ನಡೆಸಿದ್ದು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಜೀವನ ವಿಷಯಾಧಾರಿತ ಹೂವಿನ ಪ್ರತಿಕೃತಿ ಜನ ಮನ ಸೆಳೆಯುತ್ತ ಎಂಬುದನ್ನು ಕಾಡುನೋಡಬೇಕಿದೆ