ಗಾಯದಿಂದ ಇನ್ನೂ ಸಂಪೂರ್ಣ ಗುಣಮುಖರಾಗದ ಕಾರಣ ಶ್ರೀಲಂಕಾ ತಂಡದ ವೇಗಿ ದುಷ್ಮಾಂತ ಚಮೀರಾ ಅವರು ಭಾರತ ವಿರುದ್ದದ ಟಿ20 ಹಾಗೂ ಏಕದಿನ ಸರಣಿಗಳಿಂದ ಹೊರ ಬಿದ್ದಿದ್ದಾರೆ.
ದುಷ್ಮಾಂತ ಚಮೀರಾ ಅವರು ಬ್ರಾಂಕೈಟಿಸ್ ಮತ್ತು ಉಸಿರಾಟದ ಸೋಂಕಿನಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಆದ್ದರಿಂದ ಟಿ20 ಸರಣಿಯಿಂದ ಹೊರ ನಡೆದಿದ್ದಾರೆ,” ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಅಂದ ಹಾಗೆ ದುಷ್ಮಾಂತ ಚಮೀರಾ ಅವರ ಸ್ಥಾನಕ್ಕೆ ಅಸಿತ ಫೆರ್ನಾಂಡೊ ಆಯ್ಕೆಯಾಗಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕ್ಯಾಂಡಿ ಫಾಲ್ಕನ್ಸ್ ತಂಡಕ್ಕೆ ದುಷ್ಮಾಂತ ಚಮೀರಾ ಅವರನ್ನು ಆಯ್ಕೆ ಮಾಡಲಾಗಿತ್ತು.
ದುಷ್ಮಾಂತ ಚಮೀರ ಅವರ ಗಾಯದ ವರದಿಗಳು ಮಂಗಳವಾರ ಬಹಿರಂಗವಾಗಿವೆ. ಈ ಹಿನ್ನೆಲೆಯಲ್ಲಿ ಭಾರತ ವಿರುದ್ದದ ಟಿ20 ಹಾಗೂ ಏಕದಿನ ಸರಣಿಗಳಿಂದ ಹೊರಬೀಳಲಿದ್ದಾರೆಂದು ಖಚಿತವಾಗಿದೆ,” ಎಂದು ಶ್ರೀಲಂಕಾ ಚೀಫ್ ಸೆಲೆಕ್ಟರ್ ಉಪುಲ್ ತರಂಗ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ವೇಳೆ ಶ್ರೀಲಂಕಾ ಕ್ರಿಕೆಟ್ ತಂಡದ ಹಂಗಾಮಿ ಕೋಚ್ ಸನತ್ ಜಯಸೂರ್ಯ ಇದ್ದರು.