ಬೆಂಗಳೂರು: ಹುಲಿ ಉಗುರು (Tiger Claw) ಪೆಂಡೆಂಟ್ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟರ ಬಳಿಕ ಈಗ ರಾಜಕಾರಣಿಗಳಿಗೂ ಸಂಕಷ್ಟ ಶುರುವಾಗಿದೆ. ಕೆಲ ರಾಜಕಾರಣಿಗಳ ಆಪ್ತರು, ಮಕ್ಕಳು ಹುಲಿ ಉಗುರಿನ ಸುಳಿಯಲ್ಲಿ ಸಿಲುಕಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ‘ಹುಲಿ ಉಗುರು ಕೇಸ್ನಲ್ಲಿ ಹಿಂದೂಗಳ ಟಾರ್ಗೆಟ್ ಮಾಡಲಾಗ್ತಿದೆ’ ಎಂಬ ಅರವಿಂದ ಬೆಲ್ಲದ್ ಆರೋಪಕ್ಕೆ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಯಾವುದೇ ಧರ್ಮಕ್ಕೆ ಸೇರಿದರೂ ಕಾನೂನು ಒಂದೇ. ಕಾನೂನಿನಡಿ ಕ್ರಮ ತೆಗೆದುಕೊಳ್ತೇವೆಂದು ಅರಣ್ಯ ಸಚಿವರೇ ಹೇಳಿದ್ದಾರೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.