ಹುಬ್ಬಳ್ಳಿ : ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವೇಳೆ ಹಿಂದುಪರ ಸಂಘಟನೆಗಳು ಅಡ್ಡಗಟ್ಟಿ ವಾಹನ ಸಮೇತ ಪೊಲೀಸ್ ಠಾಣೆಗೆ ಕರೆತಂದ ಘಟನೆ ನಗರದಲ್ಲಿ ನಡೆದಿದೆ. ಯಾವುದೇ ದಾಖಲೆಯಿಲ್ಲದೆ ಅಕ್ರಮವಾಗಿ ಸಾಗಾಟ ಮಾಡಲಾಗತ್ತು. ಈ ವೇಳೆ ಹಿಂದುಪರ ಕಾರ್ಯಕರ್ತರು ಅನುಮಾನಗೊಂಡು ವಾಹನ ತಡೆದಿದ್ದಾರೆ. ಈ ವೇಳೆ ವಾಹನದೊಳಗೆ ಆರೋಗ್ಯವಂತ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ.
ಹೀಗಾಗಿ ಸಂಘಟನೆ ಸದಸ್ಯರು ವಾಹನ ತಡೆದಿದ್ದಲ್ಲದೇ ವಾಹನ ಜಾನುವಾರಗಳ ಸಮೇತ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ನಗರದಲ್ಲಿ ಆರೋಗ್ಯವಂತ ಹಸುಗಳನ್ನು ಕಸಾಯಿಖಾನೆಗೆ ಸಾಗಿಸುವ ಜಾಲವಿದ್ದು ಪೊಲೀಸರು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸುವಂತೆ ಭಜರಂಗದಳದ ಕಾರ್ಯಕರ್ತರು ಆಗ್ರಹಿಸಿದರು. ಸದ್ಯ ಈ ಘಟನೆ ಸಂಬಂದ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.